ಶಿವಣ್ಣ ತಮ್ಮ ಎರಡನೇ ಪ್ರೊಡಕ್ಷನ್ನಿನಲ್ಲೂ ಗೆದ್ದಿದ್ದಾರೆ. ವೇದ ಚಿತ್ರದ ಮೂಲಕ ನಿರ್ಮಾಪಕಿಯಾಗಿ ಎಂಟ್ರಿ ಕೊಟ್ಟಿದ್ದ ಗೀತಾ ಶಿವರಾಜ್ ಕುಮಾರ್, 2ನೇ ಚಿತ್ರ ಭೈರತಿ ರಣಗಲ್ ಚಿತ್ರದಲ್ಲೂ ಗೆಲುವಿನ ನಗು ಬೀರಿದ್ದಾರೆ. ನವೆಂಬರ್ 15ರಂದು ರಿಲೀಸ್ ಆಗಿದ್ದ ಭೈರತಿ ರಣಗಲ್, ಯಶಸ್ವಿಯಾಗಿ 4ನೇ ವಾರ ಮುನ್ನಡೆಯುತ್ತಿದೆ. 25ನೇ ದಿನ ಪೂರೈಸಿದೆ.
ಪುಷ್ಪ ಚಿತ್ರದಿಂದಾಗಿ ಹಲವು ಶೋಗಳನ್ನು ಕಳೆದುಕೊಂಡಿದ್ದರೂ, ಥಿಯೇಟರುಗಳಲ್ಲಿ ಭೈರತಿಯ ಗಳಿಕೆ ಚೆನ್ನಾಗಿಯೇ ಇದೆ. ಪುಷ್ಪ ಚಿತ್ರ ಕನ್ನಡದ ಹಲವು ಚಿತ್ರಗಳ ಶೋಗಳನ್ನು ಕಿತ್ತುಕೊಂಡಿತ್ತು. ಶಿವಣ್ಣ ಅಭಿನಯದ ಭೈರತಿ ರಣಗಲ್ ಚಿತ್ರದ ಶೋಗಳೂ ಕೂಡಾ ಪುಷ್ಪ ಚಿತ್ರಕ್ಕೆ ಟ್ರಾನ್ಸ್‌ಫರ್ ಆಗಿದ್ದರು. ಇನ್ನು ಬಾಕ್ಸಾಫೀಸ್ ಕಲೆಕ್ಷನ್ ವಿಚಾರಕ್ಕೆ ಬಂದರೆ ಸಿನಿಮಾ 25 ದಿನಕ್ಕೆ ಅಂದಾಜು 24 ಕೋಟಿ ರೂ. ಗಳಿಕೆ ಕಂಡಿದೆ. ಒಟ್ಟು 12 ಕೋಟಿ ರೂ.ಗೆ ಚಿತ್ರದ ಡಿಸ್ಟ್ರಿಬ್ಯೂಷನ್ ರೈಟ್ಸ್ ಮಾರಾಟವಾಗಿದೆ ಎನ್ನಲಾಗ್ತಿದೆ. ಹಿಂದಿ ಡಿಜಿಟಲ್ ರೈಟ್ಸ್, ಡಬ್ಬಿಂಗ್ ರೈಟ್ಸ್ ಅದೇರೀತಿ ತೆಲುಗು, ತಮಿಳು ಡಬ್ಬಿಂಗ್ ರೈಟ್ಸ್ ಕೂಡ ಒಳ್ಳೆ ಮೊತ್ತಕ್ಕೆ ಬಿಕರಿಯಾಗಿದೆ. ತೆಲುಗು, ತಮಿಳು ಭಾಷೆಗಳಲ್ಲಿ ರಿಲೀಸ್ ಆದ ಚಿತ್ರಕ್ಕೆ ಒಳ್ಳೆಯ ಓಪನಿಂಗ್ ಸಿಕ್ಕರೂ, ಒನ್ಸ್ ಎಗೇನ್ ಪುಷ್ಪನ ಎದುರು ಭೈರತಿ ನಿಲ್ಲಲಾಗಲಿಲ್ಲ. ವಾಸ್ತವ ಏನೆಂದರೆ ಭೈರತಿ ರಣಗಲ್ ಚಿತ್ರಕ್ಕೆ ತೆಲುಗು ಹಾಗೂ ತಮಿಳಿನಲ್ಲಿ 5 ಶೋಗಳನ್ನೂ ಕೊಡಲಿಲ್ಲ. ಹೀಗಾಗಿ ಡಬ್ಬಿಂಗ್ ಮಾಡಿ ಅಲ್ಲಿಯೂ ರಿಲೀಸ್ ಮಾಡಿದ್ದಷ್ಟೇ ಭೈರತಿ ರಣಗಲ್ ಸಾಧನೆ ಎನ್ನಬಹುದು. ಚಿತ್ರ ನೋಡಿದ ಪ್ರೇಕ್ಷಕರು ಇನ್ನೊಬ್ಬರಿಗೆ ಹೇಳಿ, ಅವರು ಚಿತ್ರಮಂದಿರಕ್ಕೆ ಬರಬೇಕು ಎನ್ನುವ ಹೊತ್ತಿನಲ್ಲಿ ಭೈರತಿ ರಣಗಲ್ ಎತ್ತಂಗಡಿಯಾಗಿ ಆಗಿತ್ತು.
ಹೀಗಿದ್ದರೂ ಕನ್ನಡದಲ್ಲಿ ಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ‘ಭೈರತಿ ರಣಗಲ್’ ಚಿತ್ರರಂಗಕ್ಕೆ ಹೊಸ ಉತ್ಸಾಹ ತುಂಬಿತ್ತು. ಶಿವಣ್ಣನ ಲುಕ್, ಖದರ್ ನೋಡಿ ಅಭಿಮಾನಿಗಳು ಥ್ರಿಲ್ಲಾಗಿದ್ದರು. ಥಿಯೇಟರ್‌ನಲ್ಲೂ ಈ ಸಿನಿಮಾ ಪ್ರೇಕ್ಷಕರಿಗೆ ಈ ಸಿನಿಮಾ ಇಷ್ಟ ಆಗಿತ್ತು. ‘ಮಫ್ತಿ’ ಬಳಿಕ ಮತ್ತೊಮ್ಮೆ ಶಿವಣ್ಣ ಹಾಗೂ ನರ್ತನ್ ಕಾಂಬಿನೇಷನ್ ಕ್ಲಿಕ್ ಆಗಿದೆ. ಒಟ್ಟಿನಲ್ಲಿ ಶಿವಣ್ಣ ಅವರು ಹೋಂ ಬ್ಯಾನರ್ ಸಿನಿಮಾದಲ್ಲಿ ಮತ್ತೊಮ್ಮೆ ಗೆದ್ದಿದ್ದಾರೆ.
ಹೀಗೆ ಗೆದ್ದಿರುವ ಖುಷಿಯಲ್ಲಿಯೇ ಶಿವಣ್ಣ, ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಕ್ಕೆ ತೆರಳಲಿದ್ದಾರೆ. ಟ್ರಿಟ್ ಮೆಂಟ್ ಮುಗಿಸಿ ಬಂದ ನಂತರ ಮತ್ತೊಮ್ಮೆ ಎಂದಿನಂತೆ ಆಕ್ಟಿವ್ ಆಗಲಿದ್ದಾರೆ. ಎ ಫಾರ್ ಆನಂದ್, ಉತ್ತರಕಾಂಡ ಸೇರಿದಂತೆ ಹಲವು ಚಿತ್ರಗಳು ಶಿವಣ್ಣ ಅವರಿಗಾಗಿಯೇ ಕಾದು ಕುಳಿತಿವೆ. 45 ರಿಲೀಸ್ ಆಗೋಕೆ ರೆಡಿಯಾಗುತ್ತಿದೆ. ಶಿವಣ್ಣ ಅವರ ಆರೋಗ್ಯದ ಬಗ್ಗೆ ಅಭಿಮಾನಿಗಳು ಗಾಬರಿಯಾಗಿರಬಹುದು, ಆದರೆ ಶಿವಣ್ಣ ಮಾತ್ರ ಧೈರ್ಯವಾಗಿಯೇ ಇದ್ದಾರೆ.