ಯಾವಾಗ ಬರಬಹುದು ಶಿವಣ್ಣ.. ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಯಾವಾಗ ತಾನು ಕರ್ನಾಟಕದಲ್ಲಿ ಕಾಲಿಟ್ಟೇನು ಎಂದು ಅತ್ತ ಶಿವಣ್ಣ ಕೂಡಾ ಕಾಯುತ್ತಿದ್ದಾರೆ. ಇಬ್ಬರ ಪ್ರಾರ್ಥನೆಗಳೂ ಫಲಿಸುವ ಸಮಯ ಹತ್ತಿರುವಾಗುತ್ತಿದೆ.
ಅಮೆರಿಕದ ಆಸ್ಪತ್ರೆ ಹೊರಾಂಗಣದಲ್ಲಿ ಪತ್ನಿ ಗೀತಾ ಜೊತೆ ವಾಯು ವಿಹಾರ ಮಾಡಿರುವ ಶಿವಣ್ಣ ಫೋಟೋ ಅಭಿಮಾನಿಗಳ ಸಂಭ್ರಮಕ್ಕೆ ಕಾರಣವಾಗಿದೆ. 2024ರ ಡಿಸೆಂಬರ್ 24ರಂದು ಅಮೆರಿಕದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆಗೊಳಗಾದ ಶಿವರಾಜ್ಕುಮಾರ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಶೀಘ್ರದಲ್ಲೇ ಕರುನಾಡಿಗೆ ವಾಪಸ್ಸಾಗಲಿದ್ದಾರೆ.
ಶೀಘ್ರದಲ್ಲೇ ಎಂದರೆ ಜನವರಿ 24ಕ್ಕೆ. ಅದಾದ ನಂತರ ಇಲ್ಲಿ ರೆಸ್ಟ್ ಮಾಡುವ ಶಿವಣ್ಣ, ಮಾರ್ಚ್ ಹೊತ್ತಿಗೆಲ್ಲ ಕಂಪ್ಲೀಟ್ ರಿಕವರಿ ಆಗಿ ಎಂದಿನಂತೆ ಶೂಟಿಂಗ್ ಅಖಾಡಕ್ಕೆ ಇಳಿಯಲಿದ್ಧಾರ.
ಇದರ ಬಗ್ಗೆ ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ನಲ್ಲಿ ಸಮುದ್ರದ ಬಳಿ ನಿಂತು ಕ್ಲಿಕ್ಕಿಸಿಕೊಂಡಿರುವ ಫೋಟೋ ಶೇರ್ ಮಾಡಿರುವ ಶಿವಣ್ಣ ”ನನ್ನ ಸಮುದ್ರ ನೀವು! ಮರಳಿ ಬರಲು ಹೆಚ್ಚು ಕಾಯಲು ಸಾಧ್ಯವಿಲ್ಲ” ಎಂದು ಬರೆದುಕೊಂಡಿದ್ದಾರೆ. ಹೊಸ ವರ್ಷದಂದು ‘ಶಿವರಾಜ್ಕುಮಾರ್ ಕ್ಯಾನ್ಸರ್ ಗೆದ್ದು ಬಂದಿದ್ದಾರೆ’ ಎಂದು ಗುಡ್ ನ್ಯೂಸ್ ಕೊಟ್ಟಿದ್ದ ಶಿವಣ್ಣ, ಶೀಘ್ರದಲ್ಲೇ ಈ ತಿಂಗಳ ಕೊನೆಗೆ ಬೆಂಗಳೂರಿಗೆ ವಾಪಸ್ ಬರಲಿದ್ದಾರೆ.
ಅಂದರೆ ಜನವರಿ 24 ಡೇಟ್ ಫಿಕ್ಸ್ ಆಗಿದ್ದರೂ, ಅಷ್ಟು ಹೊತ್ತಿಗೆ ಶಿವಣ್ಣನ ಎಲ್ಲ ರಿಪೋರ್ಟ್ ನಾರ್ಮಲ್ ಆಗಿರಬೇಕು. ಡಿಸ್ ಚಾರ್ಜ್ ಆಗುವುದಕ್ಕೆ ಆಸ್ಪತ್ರೆಯವರು ಒಪ್ಪಿಕೊಳ್ಳಬೇಕು. ಅದಾದ ಮೇಲೆ ಡೇಟ್ ಫಿಕ್ಸ್ ಆಗಲಿದೆ.