ಭಾರತದ ನಂ.2 ಶ್ರೀಮಂತ ಅದಾನಿ, ಮೋದಿಯ ಆಪ್ತಮಿತ್ರ ಎಂದೇ ಹೆಸರಾದವರು. ಮೋದಿ ಅವರ ಸ್ನೇಹಿತ ಎನ್ನುವ ಕಾರಣಕ್ಕೆ, ಅದಾನಿ ಮಾಡುವ ಪ್ರತಿ ವ್ಯವಹಾರದಲ್ಲೂ ಹುಳುಕು ಹುಡುಕ್ತಾರೇನೋ ಎನ್ನುವಷ್ಟರಮಟ್ಟಿಗೆ ಅದಾನಿ ಪೊಲಿಟಿಕಲ್ ಅಟ್ಯಾಕ್ ಆಗ್ತಾರೆ. ಹೀಗಾಗಿ ತಮ್ಮ ಬಿಸಿನೆಸ್ಸುಗಳಿಂದ, ಜೊತೆಯಲ್ಲೇ ರಾಜಕೀಯವಾಗಿಯೂ ಅಷ್ಟೇ ಸುದ್ದಿ ಮಾಡ್ತಾರೆ. ಕಾಂಗ್ರೆಸ್ ನಾಯಕರು, ಅದರಲ್ಲೂ ರಾಹುಲ್ ಗಾಂಧಿ ಎಲ್ಲೇ ಹೋಗಲಿ, ಎಲ್ಲೇ ಮಾತನಾಡಲಿ.. ಅದಾನಿ ಹೆಸರತ್ತದೆ ಭಾಷಣ ಮುಗಿಸೋದಿಲ್ಲ. ಅಂತಹ ಅದಾನಿ ಅರೆಸ್ಟ್ ಆಗ್ಬಹುದು ಅನ್ನೋ ಸುದ್ದಿ, ಜಗತ್ತಿನೆಲ್ಲೆಡೆ ಸಂಚಲನ ಸೃಷ್ಟಿಸಿದೆ.ಈ ಗೌತಮ್ ಅದಾನಿ ವಿರುದ್ಧ ನ್ಯೂಯಾರ್ಕ್ ನ್ಯಾಯಾಲಯ ಅರೆಸ್ಟ್ ವಾರೆಂಟ್ ಕೊಟ್ಟಿದೆ.
ಒಂದು ಕಾಲದಲ್ಲಿ ವಿಶ್ವದ ಟಾಪ್ 10 ಶ್ರೀಮಂತರಲ್ಲಿ ಒಬ್ಬರಾಗಿದ್ದ ಅದಾನಿ, ಪ್ರಧಾನಿ ಮೋದಿಯವರ ಆಪ್ತ ಸ್ನೇಹಿತ ಅದಾನಿ, ಅಂಬಾನಿ ಶ್ರೀಮಂತಿಕೆ ಮೀರಿ ಬೆಳೆಯುವ ಉತ್ಸಾಹದಲ್ಲಿದ್ದ ಅದಾನಿ, ಈಗ ಅರೆಸ್ಟ್ ಆಗೋ ಭಯದಲ್ಲಿದ್ದಾರೆ.
ಇಷ್ಟಕ್ಕೂ ಈ ಅದಾನಿ ವಿರುದ್ಧ ಇರೋ ಆರೋಪ ಇದ್ಯಲ್ಲ, ಅದೇನೂ ಸಣ್ಣದಲ್ಲ. ಅಮೆರಿಕದ ಕಂಪೆನಿ ಮೂಲಕ ಲಂಚ ಕೊಡೋಕೆ ಟ್ರೈ ಮಾಡಿದ್ರು. ಹಾಗೆ ಲಂಚ ಕೊಟ್ಟು ತಮ್ಮ ಕಂಪೆನಿಯ ಬಗ್ಗೆ ಸುಳ್ ಸುಳ್ಳೇ ಲಾಭದ ಲೆಕ್ಕ ತೋರಿಸಿ, ಹೂಡಿಕೆದಾರರನ್ನು ಯಾಮಾರಿಸಿದ್ರು ಅನ್ನೋದು.
ಕಾನೂನು ಪ್ರಕಾರ ಯಾವ ದೇಶದಲ್ಲೇ ಆದ್ರೂ ಇದು ದೊಡ್ಡ ಕ್ರೈಮೇ. ಆದರೆ ಭಾರತದಲ್ಲಿ ಅದಕ್ಕೆಲ್ಲ ಅಡ್ಜಸ್ಟ್ ಆಗೋಗಿದ್ದಾರೆ. ಆದರೆ ಅಮೆರಿಕದಲ್ಲಿ ಇನ್ನೂ ಆಗಿಲ್ಲ. ಹೀಗಾಗಿಯೇ ಅದಾನಿ ಅವರ ಗ್ರೂಪ್‌ಗೆ ಹೂಡಿಕೆ ಮಾಡಿದ್ದ ಕಂಪೆನಿಯ ಮ್ಯಾನೇಜ್‌ಮೆಂಟ್ ಚೇಂಜ್ ಆಗ್ತಿದ್ದಂತೆ, ಇಡೀ ಪ್ರಕರಣ ಹೊರಬಿದ್ದು, ಕೇಸ್ ಆಗಿ, ತನಿಖೆ ಆಗಿ, ಈಗ ಚಾರ್ಜ್‌ಶೀಟ್ ಕೂಡಾ ಆಗಿದೆ.
ಅದರ ಪ್ರಕಾರ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ, ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಡಾಲರ್ ಲಾಭದ ನಿರೀಕ್ಷೆ ಇಟ್ಟುಕೊಂಡು ಸೋಲಾರ್ ಪ್ಲಾಂಟ್ ಮಾಡೋಕೆ ಮುಂದಾಗಿದ್ರು. ಆದರೆ ಆ ಸೋಲಾರ್ ಪ್ಲಾಂಟ್ ಮಾಡೋದಕ್ಕೆ ಅಧಿಕಾರಿಗಳಿಗೆ 265 ಮಿಲಿಯನ್ ಡಾಲರ್ ಲಂಚ ಕೊಟ್ಟಿದ್ರು. ಅಂದ್ರೆ ಹೆಚ್ಚೂ ಕಡಿಮೆ 2350 ಕೋಟಿ ಲಂಚ ಕೊಟ್ಟಿದ್ರು ಅನ್ನೋದು. ಇದೆಲ್ಲ ಈಚೆಗೆ ಬಂದಿದ್ದು ಸುಮಾರು ಒಂದು ಒಂದೂವರೆ ವರ್ಷದ ಹಿಂದೆ ಹಿಂಡನ್ ಬರ್ಗ್ ರಿಸರ್ಚ್ ಕಂಪೆನಿ ಆರೋಪ ಮಾಡಿತ್ತಲ್ಲ, ಆಗ.
ಅದಾನಿ ಅವರಿಗೆ ಈ ಕೇಸು, ಅರೆಸ್ಟ್ ವಾರೆಂಟಿನ ಹೊಡೆತ ಯಾವ ರೀತಿ ಬಿದ್ದಿದೆ ಅಂದ್ರೆ ನಂಬೋದಕ್ಕೆ ಜನ ತಯಾರಿಲ್ಲ. ಅದಾನಿ ಕಂಪೆನಿಗೆ ದುಡ್ಡು ಹಾಕಿರೋ ಹೂಡಿಕೆದಾರರೂ ರೆಡಿ ಇಲ್ಲ. ಒಂದೇ ದಿನಕ್ಕೆ ಎರಡೂವರೆ ಲಕ್ಷ ಕೋಟಿಗೂ ಜಾಸ್ತಿ ದುಡ್ಡು ನಷ್ಟ ಆಗಿದೆ. ಅಂದ್ರೆ ಷೇರುಗಳ ವ್ಯಾಲ್ಯೂ ಅಷ್ಟರಮಟ್ಟಿಗೆ ಬಿದ್ದಿದೆ.
ಅದಾನಿ ಕಂಪೆನಿ ಏನೋ, ಇದೆಲ್ಲ ಬೋಗಸ್ಸು, ಕೇಸು, ವಾರೆಂಟಿಗೆ ಅರ್ಥನೇ ಇಲ್ಲ. ಅದೆಲ್ಲ ಸುಳ್ಳು ಅಂತ ಸ್ಪಷ್ಟನೆ ಕೊಡ್ತಿದೆ. ಆದರೆ ಹೂಡಿಕೆದಾರರು ನಂಬ್ತಾ ಇಲ್ಲ.
ಅತ್ತ ಕೇಸು ಬೀಳ್ತಿದ್ದಂತೆ ಷೇರುಪೇಟೆಯಲ್ಲಿ ಅದಾನಿ ಸಾಮ್ರಾಜ್ಯ ಹಂತ ಹಂತವಾಗಿ ಪತನವಾಗ್ತಾ ಇದ್ರೆ, ಅದಾನಿ ಜೊತೆ ಅಗ್ರಿಮೆಂಟ್ ಮಾಡಿಕೊಂಡಿದ್ದ ಕಂಪೆನಿಗಳೆಲ್ಲ ಒಂದೊಂದಾಗಿ ಹಿಂದೆ ಸರೀತಿವೆ. ಕೀನ್ಯಾ ದೇಶದವ್ರಂತೂ ಜಸ್ಟ್ ಒಂದು ತಿಂಗಳ ಹಿಂದೆ ಇದೇ ಅದಾನಿ ಗ್ರೂಪ್ ಜೊತೆ ಮಾಡಿಕೊಂಡಿದ್ದ ಎಲ್ಲ ಒಪ್ಪಂದಗಳನ್ನೂ ರದ್ದು ಮಾಡಿದೆ.
ಕೀನ್ಯಾದವರ ಜೊತೆ ಏರ್ ಪೋರ್ಟ್, ಬಂದರುಗಳ ನಿರ್ವಹಣೆಯನ್ನೆಲ್ಲ 30 ವರ್ಷಕ್ಕೆ ತಗೊಂಡು ಅಗ್ರಿಮೆಂಟ್ ಮಾಡ್ಕೊಂಡಿತ್ತು. ಅದೂ ಬರೋಬ್ಬರಿ 735 ಮಿಲಿಯನ್ ಡಾಲರ್ ಡೀಲ್. ಈಗ ಕಂಪ್ಲೀಟ್ ಡೀಲ್‌ನ್ನೇ ರದ್ದು ಮಾಡಿದೆ ಕೀನ್ಯಾ. ಇದು ಕಂಟಿನ್ಯೂ ಆಗುತ್ತೆ, ಇನ್ನೂ ಸುಮಾರು ದೇಶಗಳು ಅದಾನಿ ಜೊತೆ ಮಾಡಿಕೊಂಡಿದ್ದ ಒಪ್ಪಂದಗಳನ್ನ ರದ್ದು ಮಾಡ್ತವೆ ಅನ್ನೋ ಸುದ್ದಿ, ಅದಾನಿ ಸಾಮ್ರಾಜ್ಯ ಪತನವಾಗಬಹುದು ಅನ್ನೋ ಆತಂಕ ಹುಟ್ಟಿಸಿವೆ.
ಆದರೆ ಇದೆಲ್ಲ ಪಿತೂರಿ, ಮೋದಿ ಜೊತೆ ಫ್ರೆಂಡ್ ಶಿಪ್ ಇರೋ ಕಾರಣಕ್ಕೇ ಹೀಗೆಲ್ಲ ಆಗ್ತಾ ಇದೆ. ಮೋದಿಯನ್ನ ವಿರೋಧ ಮಾಡೋ ಗುಂಪು ಇಡೀ ಜಗತ್ತಿನಲ್ಲಿ ಸ್ಟ್ರಾಂಗ್ ಆಗಿದೆ ಅನ್ನೋವ್ರಿಗೇನೂ ಕೊರತೆ ಇಲ್ಲ. ಆದರೆ ಅವರ ಮಾತಿನಲ್ಲೂ ಸತ್ಯ ಇದೆ ಅನ್ನೀಸೋದೂ ಸುಳ್ಳಲ್ಲ.