ಟಾಟಾ ಕಾರುಗಳ ಬಗ್ಗೆ ಗ್ರಾಹಕರಿಗೆ ಅದೇನೋ ನಂಬಿಕೆ. ಆ ನಂಬಿಕೆಗೆ ಅನುಗುಣವಾಗಿ ಟಾಟಾ ಕಾರುಗಳು ಕೂಡಾ ಗ್ರಾಹಕರ ವಿಶ್ವಾಸ ಉಳಿಸಿಕೊಂಡಿವೆ. ಇದೀಗ ಟಾಟಾದವರ ಜನಪ್ರಿಯ ಎಸ್‌ಯುವಿಗಳಾದ ನೆಕ್ಸಾನ್, ಕರ್ವ್ ಮತ್ತು ಕರ್ವ್ ಇವಿ ಹೊಸ ಕಾರು ಮೌಲ್ಯಮಾಪನದಲ್ಲಿ 5 ಸ್ಟಾರ್ ರೇಟಿಂಗ್ ಪಡೆದಿವೆ. ಈ ಮೂರು ಎಸ್‌ಯುವಿಗಳು ವಯಸ್ಕರು ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆಯಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿವೆ.
ಟಾಟಾ ಕರ್ವ್ :
ಟಾಟಾ ಮೋಟಾರ್ಸ್‌ನ ಹೊಸದಾಗಿ ಬಿಡುಗಡೆಯಾದ ಟಾಟಾ ಕರ್ವ್ ವಯಸ್ಕರ ಪ್ರಯಾಣಿಕರ ಸುರಕ್ಷತೆಯಲ್ಲಿ 32 ರಲ್ಲಿ 29.50 ಅಂಕಗಳನ್ನು ಪಡೆದಿದ್ದರೆ, ಪ್ರಯಾಣ ಮಾಡುವ ಮಕ್ಕಳ ಸುರಕ್ಷತೆಯಲ್ಲಿ 49 ರಲ್ಲಿ 43.66 ಅಂಕಗಳನ್ನು ಗಳಿಸಿದೆ. ಮುಂಭಾಗದ ಆಫ್ ಸೆಟ್ ಕ್ರ್ಯಾಶ್ ಪರೀಕ್ಷೆಯಲ್ಲಿ ಚಾಲಕ ಮತ್ತು ಪ್ರಯಾಣಿಕರ ತಲೆ, ಎದೆ ಮತ್ತು ಕುತ್ತಿಗೆಗೆ ಇದು ಉತ್ತಮ ರಕ್ಷಣೆ ನೀಡಿದೆ. 16 ರಲ್ಲಿ 14.65 ಅಂಕಗಳೊಂದಿಗೆ, ಕೂಪೆ ಎಸ್‌ಯುವಿ ಚಾಲಕನ ಎಡಗಾಲಿಗೆ ರಕ್ಷಣೆ ನೀಡಿದೆ.
ಯಾವುದೇ ಕಾರುಗಳಿರಲಿ, ಚಾಲಕನ ತಲೆ ಮತ್ತು ಹೊಟ್ಟೆಯ ರಕ್ಷಣೆ ಅತೀ ಮುಖ್ಯವಾಗಿರುತ್ತದೆ. ಇದರಲ್ಲಿ ಅತ್ಯುತ್ತಮವಾಗಿದೆ ಅನ್ನೋ ರೇಟಿಂಗ್ ಪಡೆದುಕೊಂಡಿದೆ. ಆದರೆ ಸೈಡ್ ಮೂವಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ ಎದೆಯ ರಕ್ಷಣೆಯನ್ನು ಭಾಗಶಃ ಎಂದು ರೇಟ್ ಮಾಡಲಾಗಿದೆ. ಸೈಡ್ ಪೋಲ್ ಟೆಸ್ಟ್‌ನಲ್ಲಿ, ಟಾಟಾ ಕರ್ವ್ ಚಾಲಕನ ತಲೆ, ಎದೆ, ಹೊಟ್ಟೆ ಮತ್ತು ಸೊಂಟಕ್ಕೆ ಉತ್ತಮ ರಕ್ಷಣೆ ನೀಡುತ್ತದೆ. ಮಕ್ಕಳ ಸುರಕ್ಷತೆಯ ವಿಷಯದಲ್ಲಿ, ಟಾಟಾ ಕರ್ವ್ ಡೈನಾಮಿಕ್ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ 29 ರಲ್ಲಿ 22.66 ಅಂಕಗಳನ್ನು ಗಳಿಸಿದೆ.
ಟಾಟಾ ಕರ್ವ್ ಇವಿ :
ಇನ್ನು ಟಾಟಾ ಕರ್ವ್‌ನ ಇವಿ ಕಾರು (ಎಲೆಕ್ಟ್ರಾನಿಕ್ ವೆಹಿಕಲ್) ICE ಆವೃತ್ತಿಗಿಂತ ಸ್ವಲ್ಪ ಹೆಚ್ಚಿನ ಅಂಕಗಳನ್ನು ಗಳಿಸಿದೆ. ವಯಸ್ಕರು ಮತ್ತು ಮಕ್ಕಳ ಪ್ರಯಾಣಿಕರ ಸುರಕ್ಷತೆಯಲ್ಲಿ ಕ್ರಮವಾಗಿ 32 ರಲ್ಲಿ 30.81 ಅಂಕಗಳು ಮತ್ತು 49 ರಲ್ಲಿ 44.83 ಅಂಕಗಳನ್ನು ಗಳಿಸಿದೆ. ಚಾಲಕ ಮತ್ತು ಸಹ-ಚಾಲಕರ ತಲೆ, ಕುತ್ತಿಗೆ ಮತ್ತು ಎದೆಯ ರಕ್ಷಣೆಯ ವಿಷಯದಲ್ಲಿ ʻಅತ್ಯುತ್ತಮʼ ಎಂದು ರೇಟಿಂಗ್ ನೀಡಲಾಗಿದೆ. ಆದರೆ ಚಾಲಕನ ಕಾಲುಗಳು ಮತ್ತು ಸಹ-ಚಾಲಕರ ಎಡಗಾಲಿಗೆ ಭಾಗಶಃ ರಕ್ಷಣೆ ಒದಗಿಸಲಾಗುತ್ತದೆ ಎಂದು ರೇಟಿಂಗ್ ಕೊಡಲಾಗಿದೆ.
ಸೈಡ್ ಮೂವಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ, ಚಾಲಕನ ತಲೆ ಮತ್ತು ಹೊಟ್ಟೆಗೆ ರಕ್ಷಣೆಯನ್ನು ಅತ್ಯುತ್ತಮ ಎಂದು ರೇಟಿಂಗ್ ಕೊಡಲಾಗಿದೆ., ಆದರೆ ಎದೆಯ ರಕ್ಷಣೆಯ ವಿಷಯದಲಿಲ ಭಾಗಶಃ ಎಂದು ರೇಟಿಂಗ್ ಕೊಡಲಾಗಿದೆ. ಈ ಕಾರು ಸೈಡ್ ಪೋಲ್ ಟೆಸ್ಟ್‌ನಲ್ಲಿ, ಎಸ್‌ಯುವಿ ಚಾಲಕನ ತಲೆ, ಎದೆ, ಸೊಂಟ ಮತ್ತು ಹೊಟ್ಟೆಗೆ ಉತ್ತಮ ರಕ್ಷಣೆ ನೀಡಿದೆ. ಡೈನಾಮಿಕ್ ಮಕ್ಕಳ ಪ್ರಯಾಣಿಕರ ಸುರಕ್ಷತಾ ಪರೀಕ್ಷೆಯಲ್ಲಿ, ಇದು 29 ರಲ್ಲಿ 23.83 ಅಂಕಗಳನ್ನು ಗಳಿಸಿದೆ.
ಟಾಟಾ ಕರ್ವ್ ಮತ್ತು ಕರ್ವ್ ಇವಿಗಳು ಸ್ವಯಂಚಾಲಿತ ತುರ್ತು ಬ್ರೇಕಿಂಗ್, ಹೊಂದಾಣಿಕೆಯ ಕ್ರೂಸ್ ನಿಯಂತ್ರಣ, ಲೇನ್ ಕೀಪ್ ಅಸಿಸ್ಟ್ ಮತ್ತು ಇನ್ನೂ ಹೆಚ್ಚಿನ ವೈಶಿಷ್ಟ್ಯಗಳನ್ನು ನೀಡುವ ಲೆವೆಲ್ 2 ಸುಧಾರಿತ ಚಾಲಕ ವ್ಯವಸ್ಥೆ, ಡ್ರೈವರುಗಳಿಗೆ ಸೇಫ್ಟಿ ಕೊಡುತ್ತವೆ.
ಟಾಟಾ ನೆಕ್ಸಾನ್:
ಇನ್ನು ಟಾಟಾ ನೆಕ್ಸಾನ್, ಈ ವರ್ಷದ ಆರಂಭದಲ್ಲಿ, ಗ್ಲೋಬಲ್ NCAP ನಲ್ಲಿ 5-ಸ್ಟಾರ್ ಸುರಕ್ಷತಾ ರೇಟಿಂಗ್ ಪಡೆದಿತ್ತು. ಅದೇ ಟಾಟಾ ನೆಕ್ಸಾನ್ ಈಗ ಭಾರತ್ NCAP ನಲ್ಲಿಯೂ ಅದೇ ಸಾಧನೆ ಮಾಡಿದೆ. ಸಬ್ ಕಾಂಪ್ಯಾಕ್ಟ್ ಎಸ್‌ಯುವಿ ವಯಸ್ಕರು ಮತ್ತು ಮಕ್ಕಳ ಸುರಕ್ಷತೆಯಲ್ಲಿ ಕ್ರಮವಾಗಿ 32 ರಲ್ಲಿ 29.41 ಅಂಕಗಳು ಮತ್ತು 49 ರಲ್ಲಿ 43.83 ಅಂಕಗಳನ್ನು ಗಳಿಸಿದೆ. ಮುಂಭಾಗದ ಆಫ್‌ಸೆಟ್ ಬ್ಯಾರಿಯರ್ ಕ್ರ್ಯಾಶ್ ಟೆಸ್ಟ್ ಸಮಯದಲ್ಲಿ, ಇದು ಚಾಲಕ ಮತ್ತು ಪ್ರಯಾಣಿಕರ ತಲೆ ಮತ್ತು ಕುತ್ತಿಗೆಗೆ ಉತ್ತಮ ರಕ್ಷಣೆ ನೀಡಿದೆ. ಚಾಲಕನ ಎದೆಯ ರಕ್ಷಣಾ ಪರೀಕ್ಷೆಯಲ್ಲಿ, ನೆಕ್ಸಾನ್ 16 ರಲ್ಲಿ 14.65 ಅಂಕಗಳನ್ನು ಗಳಿಸಿದೆ. 16 ರಲ್ಲಿ 14.76 ಅಂಕಗಳೊಂದಿಗೆ, ಕಾಂಪ್ಯಾಕ್ಟ್ ಎಸ್‌ಯುವಿ ಚಾಲಕನ ತಲೆ ಮತ್ತು ಹೊಟ್ಟೆಗೆ ಉತ್ತಮ ರಕ್ಷಣೆ ಮತ್ತು ಸೈಡ್ ಮೂವಬಲ್ ಬ್ಯಾರಿಯರ್ ಟೆಸ್ಟ್‌ನಲ್ಲಿ ಸಾಕಷ್ಟು ಎದೆಯ ರಕ್ಷಣೆ ನೀಡಿದೆ. ಸೈಡ್ ಪೋಲ್ ಟೆಸ್ಟ್‌ನಲ್ಲಿ ಚಾಲಕನ ತಲೆ, ಎದೆ, ಹೊಟ್ಟೆ ಮತ್ತು ಸೊಂಟದ ರಕ್ಷಣೆಯನ್ನು ಸಹ ಅತ್ಯುತ್ತಮವೆಂದು ರೇಟ್ ಮಾಡಲಾಗಿದೆ.
ಆರು ಏರ್ ಬ್ಯಾಗ್ ಗಳು (ಹಿಂಬದಿ ಪ್ರಯಾಣಿಕರಿಗೂ ಸೇರಿದಂತೆ), ಎಲೆಕ್ಟ್ರಾನಿಕ್ ಕಂಟ್ರೋಲಿಂಗ್ ಸಿಸ್ಟಂ, ಐಸೊಫಿಕ್ಸ್ ಮತ್ತು ಹಿಲ್ ಹೋಲ್ಡ್ ಕಂಟ್ರೋಲ್ ಕೂಡಾ ನೆಕ್ಸಾನ್ʻನಲ್ಲಿ ಅತ್ಯುತ್ತಮ ಗುಣಮಟ್ಟದಲ್ಲಿವೆ.