ಇರೋದೇ 12 ರಾಶಿಗಳು. ಆ 12ರಲ್ಲಿ ರಾಶಿಗಳ ಜನ ಹುಟ್ಟಿರೋದೇ ದುಡ್ಡು ಮಾಡೋಕೆ ಅಂತಾರಂತೆ. ದುಡ್ಡನ್ನೇನು ಹೊತ್ಕೊಂಡ್ ಹೋಗ್ತೀವಾ ಅಂತಾ ವೇದಾಂತ ಮಾತನಾಡುವ ಜನ ಕೂಡಾ, ಬದುಕಿದ್ದಾಗ ದುಡ್ಡಿಗಾಗಿ ಹೋರಾಡ್ತಾರೆ. ಹಣವನ್ನು ಸಾಯುವಾಗ ಹೊತ್ತುಕೊಂಡು ಹೋಗೋದಕ್ಕೆ ಸಾಧ್ಯವಾಗದೇ ಇರಬಹುದು, ಆದರೆ ಬದುಕಿರುವಾಗ ನೆಮ್ಮದಿಯ ಬದುಕು ನಡೆಸುವುಕ್ಕೆ ಹಣ ಅತ್ಯಂತ ಅಗತ್ಯ ಎನ್ನುವುದಂತೂ ಸತ್ಯ. ಹೀಗಾಗಿಯೇ ಜೀವನದಲ್ಲಿ ಪ್ರತಿಯೊಬ್ಬರೂ ಹಣವನ್ನು ಬಯಸುತ್ತಾರೆ. ಆದರೆ ದಿನಪೂರ್ತಿ ಕಷ್ಟಪಟ್ಟು ದುಡಿದರೂ ಕೂಡ ತಮ್ಮ ಅಗತ್ಯಗಳನ್ನು ಪೂರೈಸಿಕೊಳ್ಳುವುದಕ್ಕೆ ಕೆಲವೊಮ್ಮೆ ಸಾಧ್ಯವಾಗುವುದಿಲ್ಲ. ಆದರೆ ಈ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 6 ರಾಶಿಯವರಿಗೆ ಹಣ ಕಾಲಬುಡದಲ್ಲಿರುತ್ತದಂತೆ.
ಮೇಷ ರಾಶಿ :
ಮೇಷ ರಾಶಿಯವರಿಗೆ ಒಂದಿಷ್ಟು ಆತುರ ಬುದ್ದಿ. ಇವರ ಬಳಿ ಯಾವುದೇ ಕೆಲಸವನ್ನು ನಿಧಾನವಾಗಿ ಮಾಡುವಂತಹ ತಾಳ್ಮೆ ಇರೋದಿಲ್ಲ. ಎಲ್ಲವು ಕೂಡ ಬೇಗ ಬೇಗ ಮುಗಿಯಬೇಕು ಎನ್ನುವ ಆತುರದಲ್ಲೇ ಇರ್ತಾರೆ. ಇವರ ಈ ಉತ್ಸಾಹವೇ ಇವರಿಗೆ ತಾವು ಮಾಡುವ ಕೆಲಸದಕ್ಕೆ ಒಂದು ಪ್ಯಾಷನ್ ಹುಟ್ಟುಹಾಕುತ್ತದಂತೆ.
ಇವರ ಬಳಿ ಕಾನ್ಫಿಡೆನ್ಸ್ ಅನ್ನೋದು ಹೇಗಿರುತ್ತೆ ಎಂದರೆ, ಇವರು ಸೋಲನ್ನು ಇಷ್ಟಪಡಲ್ಲ. ಗುರಿಯತ್ತ ವೇಗವಾಗಿ ಸಾಗುತ್ತಾರೆ. ಯಾವುದೇ ವಿಚಾರದಲ್ಲಿ ತಾಳ್ಮೆ ಇಲ್ಲದಿದ್ದರೂ ಗುರಿಯನ್ನು ಮುಟ್ಟೋದ್ರಲ್ಲಿ ಸದಾ ಮುಂದಿರ್ತಾರೆ. ಅತ್ಯಂತ ಕಠಿಣ ಪರಿಶ್ರಮದಿಂದ ಕೆಲಸ ಮಾಡುವ ಮೇಷದವರು, ಅತ್ಯಂತ ಸ್ಮಾರ್ಟ್ ಆಗಿಯೂ ಕೆಲಸ ಮಾಡ್ತಾರೆ. ಇವರು ಬುದ್ದಿವಂತರು.
ಸಿಂಹ ರಾಶಿ :
ಸಿಂಹ ರಾಶಿಯಲ್ಲಿ ಇರುವವರ ಆತ್ಮವಿಶ್ವಾಸವೇ ಅವರನ್ನು ಮೇಲ್ಮಟ್ಟಕ್ಕೆ ಕೊಂಡೊಯ್ಯುತ್ತೆ. ಬೇರೆ ಬೇರೆ ಕೆಲಸಗಳನ್ನು ಯಾವ ರೀತಿಯಲ್ಲಿ ಪ್ರಯೋಗಾತ್ಮಕವಾಗಿ ಮಾಡುವ ಸಾಧ್ಯತೆ ಇದೆ ಎಂಬುದರಲ್ಲಿ ಆಸಕ್ತಿ ಇರುವ ಇವರು ತಮ್ಮನ್ನು ತಾವೇ ಪ್ರಯೋಗಕ್ಕೆ ಒಡ್ಡಿಕೊಳ್ಳೋದ್ರಲ್ಲಿ ಮುಂದು. ಯಾವ ರೀತಿಯಲ್ಲಿ ಜನರ ಬಳಿ ಕೆಲಸ ಮಾಡಿಸಬಹುದು ಅನ್ನೋದು ಇವರಿಗೆ ಗೊತ್ತು. ಮಾತುಗಾರಿಕೆಯೂ ಗೊತ್ತು. ಮೌನವಾಗಿರೋದು ಕೂಡಾ ಗೊತ್ತು. ಒಟ್ಟಿನಲ್ಲಿ ಜನ ಇವರ ನಿಯಂತ್ರಣದಲ್ಲಿರ್ತಾರೆ. ಹಾಗಾಗಿ ಸಾಧನೆಗಳನ್ನು ಮಾಡೋದ್ರಲ್ಲಿ ಮುಂದಿರ್ತಾರೆ.
ಮಕರ ರಾಶಿ :
ಮಕರದವರು ಖಂಡಿತಾ ಬಕರಾಗಳಲ್ಲ. ಅತ್ಯಂತ ಕಠಿಣ ಪರಿಶ್ರಮದ ಜೀವಿಗಳು. ಕೆಲಸದಲ್ಲಿ ಸಮಯ ನೋಡೋದಿಲ್ಲ. ಹಾಗಂತ ಇವರು ಕಡಿಮೆ ಸಂಬಳಕ್ಕೆಲ್ಲ ಕೆಲಸ ಮಾಡುವವರೂ ಅಲ್ಲ. ದೊಡ್ಡ ಮಟ್ಟದ ಸಾಧನೆಯ ಗುರಿ ಇಟ್ಟುಕೊಳ್ಳೋ ಇವರು, ಬಡಪೆಟ್ಟಿಗೆ ಸೋಲನ್ನು ಒಪ್ಪಿಕೊಳ್ಳೋವ್ರಲ್ಲ. ಸಮಸ್ಯೆ ಬರೋದಕ್ಕಿಂತ ಮುಂಚೇನೆ ಮಕರ ರಾಶಿಯವರ ಬಳಿ ಅದರ ಪರಿಹಾರ ಸಿದ್ಧವಾಗಿರುತ್ತದೆ. ಕೆಲಸ ಯಾವುದೇ ಇರಲಿ, ವೇಗವೇ ಇವರ ಶಕ್ತಿ. ಹೀಗಾಗಿಯೇ ಇವರ ಬಳಿ ಹಣದ ಹರಿವು ಕೂಡ ಹೆಚ್ಚಾಗಿರುತ್ತದೆ.
ವೃಶ್ಚಿಕ ರಾಶಿ :
ವೃಶ್ಚಿಕ ರಾಶಿಯವರು ಮನಸ್ಸು ಹೇಳಿದಂತೆ ನಿರ್ಧಾರವನ್ನು ತೆಗೆದುಕೊಳ್ಳೋವ್ರು. ಹೀಗಾಗಿ ಇವರು ತಮಗೆ ಸರಿ ಹೊಂದುವಂತಹ ಕ್ಷೇತ್ರದಲ್ಲಿ ಮಾತ್ರವೇ ಕೆಲಸ ಮಾಡ್ತಾರೆ. ಕೈ ತುಂಬಾ ಹಣ ಮಾಡ್ತಾರೆ. ಇದೇ ಕಾರಣಕ್ಕಾಗಿ ಅವರು ಯಾವುದೇ ಸಂಸ್ಥೆಯಲ್ಲಿ ಕೆಲಸ ಮಾಡಿದ್ರು ಅಥವಾ ತಮ್ಮದೇ ಸ್ವಂತವಾದ ಉದ್ಯಮವನ್ನು ನಡೆಸಿದರು ಕೂಡ ಲಾಭವನ್ನು ಗಳಿಸುವುದು ಪಕ್ಕ ಆಗಿರುತ್ತದೆ. ಮನೋಭಾವನೆ, ವ್ಯಕ್ತಿತ್ವದ ಬಗ್ಗೆ ಹೇಳೋದಾದ್ರೆ ವೃಶ್ಚಿಕ ರಾಶಿಯವರು ಅತ್ಯಂತ ನಿಗೂಢವಾಗಿರುತ್ತಾರೆ. ಅವರ ಪ್ಲಾನ್ ಮತ್ತು ಎಕ್ಸಿಕ್ಯೂಷನ್ ಎರಡೂ ನಿಗೂಢವಾಗಿಯೇ ಇರುತ್ತವೆ. ಆದರೆ ಬಹುತೇಕ ಯಶಸ್ಸು ಕಾಣ್ತಾರೆ. ಹೀಗಾಗಿ ಅವರು ತಮ್ಮ ಎದುರಾಳಿಗಿಂತ ಮುಂದಿರುತ್ತಾರೆ.
ಕನ್ಯಾ ರಾಶಿ :
ಕನ್ಯಾ ರಾಶಿಯವರದ್ದು ಅತ್ಯಂತ ಶ್ರೀಮಂತ ರಾಶಿ ಎನ್ನಬಹುದು. ಕನ್ಯಾ ರಾಶಿಯವರು ತಮ್ಮ ಜೀವನದಲ್ಲಿ ಪರ್ಫೆಕ್ಟ್ ಆಗಿ ಯೋಚನೆ ಮಾಡುತ್ತಾರೆ. ಮಾಡುವಂತಹ ಕೆಲಸದಲ್ಲಿ ಯೋಚಿಸಿ ಸರಿಯಾದ ಬದಲಾವಣೆಯನ್ನು ಜಾರಿಗೆ ತರುತ್ತಾರೆ. ಯಾವುದೇ ವಸ್ತು ಅಥವಾ ವಿಚಾರದಲ್ಲಿ ಕನ್ಯಾ ರಾಶಿಯವರು ಅಡ್ಜಸ್ಟ್‌ಮೆಂಟ್ ಮಾಡಿಕೊಳ್ತಿದ್ದಾರೆ ಎಂದರೆ ಅದರ ಅರ್ಥ ಅವರು ಶೀಘ್ರದಲ್ಲೇ ಹೆಚ್ಚಿನ ಲಾಭದ ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂದು. ಹೀಗಾಗಿ ಇವರು ಸದಾ ಹಣವಂತರು.