ಯತ್ನಾಳ್ ಟೀಂಗೆ ಡೆಲ್ಲಿ ಬಾಸ್ ಮೀಟಿಂಗ್ ಕೂಡಾ ಆಗ್ತಿಲ್ವಾ..? ಯತ್ನಾಳ್ ಟೀಂ ಭೇಟಿಗೆ ಅಮಿತ್ ಶಾ ಒಪ್ಪಲಿಲ್ವಾ..? ದೆಹಲಿಯಲ್ಲಿ ವಿಜಯೇಂದ್ರ ಬಣಕ್ಕೆ ಮೇಲುಗೈ ಸಿಕ್ಕಿತಾ.. ಎಂಬ ಪ್ರಶ್ನೆಗಳಿಗೆ ಜೀವ ಬಂದಿದೆ. ದೆಹಲಿಗೆ ದಂಡು ಕಟ್ಟಿಕೊಂಡು ಹೋಗಿದ್ದ ಯತ್ನಾಳ್ ಪಡೆಗೆ ಭಾರೀ ನಿರಾಸೆಯಾಗಿದ್ದು, ಯತ್ನಾಳ್ ಟೀಂ ಸದಸ್ಯರ ಭೇಟಿಗೆ ಒಪ್ಪದ ಅಮಿತ್ ಶಾ ಒಪ್ಪಿಲ್ಲ.
ಕೇಂದ್ರ ಸಚಿವ ವಿ. ಸೋಮಣ್ಣ ಅವರ ಸರ್ಕಾರಿ ನಿವಾಸದಲ್ಲಿ ಪೂಜೆ ಮುಗಿಸಿ ಭಿನ್ನರು ವಾಪಸ್ ಆಗಿದ್ದಾರೆ. ಏನ್ ಬೇಕಾದ್ರೂ ಹೇಳ್ತಾ ಹೇಳ್ತಾ ಪಕ್ಷದ ವರ್ಚಸ್ಸು ಹಾಳು ಮಾಡಬೇಡಿ ಎಂದು ರೆಬಲ್ಸ್ ಟೀಂಗೆ ಖಡಕ್ ಸೂಚನೆ ಸಿಕ್ಕಿದೆ.
ಸಾಹುಕಾರ್ ಬಿಟ್ಟಿದ್ದು ಬರೀ ವೋಳು..
ರಮೇಶ್ ಜಾರಕಿಹೊಳಿ ಹೇಳಿದ್ದಂತೆ ಜೆಪಿ ನಡ್ಡಾ ಭೇಟಿ ನಡೆದೇ ಇಲ್ಲ. ದೆಹಲಿಗೆ ಹೋಗಿದ್ದ ರಮೇಶ್ ಜಾರಕಿಹೊಳಿ ʻತಾನು ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ, ಎಲ್ಲ ವಿವರ ಕೊಟ್ಟು ಬಂದಿದ್ದೇನೆʼ ಎಂದು ಮಾಧ್ಯಮಗಳಿಗೆ ಹೇಳಿಕೆ ಕೊಟ್ಟಿದ್ದರು. ವಿಚಿತ್ರವೆಂದರೆ ಜೆಪಿ ನಡ್ಡಾ ಅವರು ಅಲ್ಲಿ ಇರಲೇ ಇಲ್ಲ. ಇದನ್ನೂ ಗಮನಿಸಿರುವ ಹೈಕಮಾಂಡ್, ಈ ರೀತಿಯ ಸುಳ್ಳು ಹೇಳಿಕೆ ನೀಡಿ ಪಕ್ಷದವರನ್ನು ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ ಎಂದು ಗರಂ ಆಗಿದೆ.
ಅದಲ್ಲದೆ ದೆಹಲಿಗೆ ಬಂದರೂ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ವಾಗ್ದಾಳಿಗೆ ಹೈಕಮಾಂಡ್ ಸಿಟ್ಟುಗೊಂಡಿದ್ದು, ಭೇಟಿಗೆ ಬಂದರೂ ಬಾಯಿಗೆ ಬೀಗ ಹಾಕದ ಯತ್ನಾಳ್ ಟೀಂ ವರ್ತನೆಗೆ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಡಿಸಿದೆ. ಹೀಗಾಗಿಯೇ ಹೈಕಮಾಂಡ್ ಟೀಂನ ನಾಯಕರನ್ನು ಭೇಟಿ ಮಾಡದೇ ವಾಪಸ್ ಕಳುಹಿಸಿದೆ.
ಇನ್ನು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಜೊತೆ ಯತ್ನಾಳ್ ಬಣದ ಅರವಿಂದ ಲಿಂಬಾವಳಿ ಮಾತ್ರ ಭೇಟಿ ಮಾಡಿದ್ದಾರೆ. ಅದೂ ಕೂಡಾ ಲಿಂಬಾವಳಿ ಹುಟ್ಟುಹಬ್ಬದ ದಿನ. ಇನ್ನು ದೆಹಲಿಯಲ್ಲಿ ಬಿಎಲ್ ಸಂತೋಷ್ ಜೊತೆ ಕುಮಾರ್ ಬಂಗಾರಪ್ಪ ಭೇಟಿಯಾಗಿದ್ದೇ ದೊಡ್ಡ ಸಾಧನೆ ಆಗಿದೆ. ಬಿಎಲ್ ಸಂತೋಷ್, ಬೊಮ್ಮಾಯಿ ಭೇಟಿ ಮಾಡಿ ಹಿಂದಿರುಗಿದ ಬಿಜೆಪಿ ರೆಬಲ್ಸ್ ಟೀಂ ಅಂತಿಮವಾಗಿ ಬೆಂಗಳೂರು, ಕರ್ನಾಟಕದಲ್ಲಿ ಹೇಳಿದ್ದನ್ನು ದೆಹಲಿ ಮೀಡಿಯಾಗಳಲ್ಲಿ ಹೇಳಿದ್ದಷ್ಟೇ ಅಲ್ಲಿಯೂ ಹೇಳಿದ್ಧಾರೆ. ಲೊಕೇಷನ್ ಬದಲಾಗಿದೆ. ಹೇಳಿಕೆಗಳು ಮಾತ್ರ ಸೇಮ್ ಟು ಸೇಮ್.
ಹೈಕಮಾಂಡ್ ಪ್ರಮುಖ ನಾಯಕರ ಭೇಟಿ ಸಾಧ್ಯವಾಗದೆ ಯತ್ನಾಳ್ ಟೀಂ ವಾಪಸ್ ಆಗಿದೆ. ದೆಹಲಿಯಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ, ಸಿದ್ದೇಶ್ವರ್ ಮೊದಲಾದವರ ಸಭೆ ನಡೆದಿದೆ. ಬಿಎಲ್ ಸಂತೋಷ್ ಜೊತೆ ಬೊಮ್ಮಾಯಿ, ಬಿಎಲ್ ಸಂತೋಷ್ ಪ್ರತ್ಯೇಕ ಸಭೆ ನಡೆಸಿದ್ದು, ದೆಹಲಿ ರಿಸಲ್ಟ್ ಬಂದ ನಂತರ ಭೇಟಿಗೆ ನೋಡೋಣ ಎಂದಿರುವ ಹೈಕಮಾಂಡ್ ಎಲ್ಲರನ್ನೂ ವಾಪಸ್ ಕಳಿಸಿದೆ.
ಒಟ್ಟಿನಲ್ಲಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ವಾಪಸ್ ಆದ ಯತ್ನಾಳ್ ಬಣದ ನಾಯಕರು ವಾಪಸ್ ಬಂದಿದ್ದಾರೆ. ಇತ್ತ ವಿಜಯೇಂದ್ರ ಬಣದ ರೇಣುಕಾಚಾರ್ಯ, ಕಟ್ಟಾ ಸುಬ್ಬಹ್ಮಣ್ಯ ನಾಯ್ಡು ಮೊದಲಾದ ಶಾಸಕರ ಸಭೆ ನಡೆದಿದ್ದು, ಯತ್ನಾಳ್ ಟೀಂ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ ನಡೆಸಿದ್ದಾರೆ.