ದೀಪಾವಳಿ, ಆಯುಧಪೂಜೆ, ವಿಜಯದಶಮಿ ಹಬ್ಬಗಳಲ್ಲಿ ಕಾರು, ಬೈಕುಗಳ ಮಾರಾಟದ ಭರಾಟೆ ಹೆಚ್ಚುತ್ತದೆ. ಅದು ಸಹಜವೂ ಹೌದು. ಏಕೆಂದರೆ ದೀಪಾವಳಿ ಮತ್ತು ವಿಜಯದಶಮಿ ಹಬ್ಬಗಳು ದುಷ್ಟ ಸಂಹಾರದ ಘಳಿಗೆಗಳು. ವಿಜಯದಶಮಿಯಂದು ಚಾಮುಂಡಿ, ದೀಪಾವಳಿಯಂದು ಶ್ರೀರಾಮನ ಗೆಲುವು ಕಂಡ ವಿಶೇಷ ದಿನಗಳು. ಈ ದಿನಗಳಲ್ಲಿ ಮನೆಗೆ ಹೊಸ ವಾಹನ, ಅದರಲ್ಲೂ ಕಾರು, ದೊಡ್ಡ ಬೈಕು ಬರುವುದನ್ನು ಶುಭ ಎಂದೇ ಪರಿಗಣಿಸುತ್ತಾರೆ. ಇದರ ಜೊತೆಗೆ ಆರ್ಥಿಕ ಲಾಭಗಳೂ ಇವೆ.
ಆರ್ಥಿಕ ವರ್ಷದ ಅಂತ್ಯ :
ಪ್ರತೀ ವರ್ಷಕ್ಕೆ 12 ತಿಂಗಳಾದರೆ, ಫೈನಾನ್ಷಿಯಲ್ ಇಯರ್ ಎಂಡ್ ಎಂದು ಪರಿಗಣಿಸುವ ತಿಂಗಳುಗಳೂ ಇವೆ. ಅವುಗಳಲ್ಲಿ ಏಪ್ರಿಲ್, ಅಕ್ಟೋಬರ್ ಪ್ರಮುಖವಾದವು. ಇವುಗಳ ಜೊತೆಗೆ ಡಿಸೆಂಬರ್ ವರ್ಷಾಂತ್ಯ ವಾದರೆ ಮಾರ್ಚ್ ಆರ್ಥಿಕ ವರ್ಷದ ಅಂತ್ಯ. ಭಾರತದ ಆರ್ಥಿಕ ವರ್ಷವು ಮಾರ್ಚ್ 31 ರಂದು ಕೊನೆಗೊಳ್ಳುತ್ತದೆ. ಕಾರ್ ಡೀಲರ್‌ಶಿಪ್‌ಗಳು ಆ ಸಮಯದಲ್ಲಿ ದೊಡ್ಡ ರಿಯಾಯಿತಿಗಳನ್ನು ನೀಡುತ್ತವೆ. ಈ ವೇಳೆಗೆ ವರ್ಷದ ಗುರಿಯನ್ನು ಪೂರ್ಣಗೊಳಿಸಬೇಕಾಗಿರುವುದು ಇದಕ್ಕೆ ಕಾರಣ. ಆದ್ದರಿಂದ, ಆರ್ಥಿಕ ವರ್ಷದ ಕೊನೆಯ ಸಮಯದಲ್ಲಿ ನೀವು ಕಾರನ್ನು ಖರೀದಿಸಿದರೆ ನೀವು ಉತ್ತಮ ರಿಯಾಯಿತಿಯನ್ನು ಪಡೆಯಬಹುದು. ಹಾಗಾದರೆ..
ದೀಪಾವಳಿಯಲ್ಲಿ ಕಾರು ಖರೀದಿಗೆ ಶುಭ ಸಮಯವೇ..?
ಆರ್ಥಿಕ ವರ್ಷದ ಅಂತ್ಯಕ್ಕೆ ಗುರಿ ಮುಟ್ಟುವುದಕ್ಕೆ ಓಡುತ್ತಿರುವ ಕಂಪೆನಿಗಳು ಆಫರ್ ಘೋಷಿಸುವುದೇ ಈ ಸಮಯದಲ್ಲಿ. ದೀಪಾವಳಿಯ ಸಮಯವು ಕಾರು ಖರೀದಿಸಲು ಉತ್ತಮ ಸಮಯವಾಗಿದೆ. ಹಬ್ಬದ ಋತುವಿನಲ್ಲಿ, ಕಾರು ಉತ್ಪಾದನಾ ಕಂಪನಿಗಳು ಮತ್ತು ಡೀಲರ್‌ಶಿಪ್‌ಗಳು ಅನೇಕ ರೀತಿಯ ಕೊಡುಗೆಗಳು ಮತ್ತು ರಿಯಾಯಿತಿಗಳನ್ನು ನೀಡುತ್ತವೆ. ಕಾರನ್ನು ಖರೀದಿಸಲು ಇದು ಉತ್ತಮ ಸಮಯ ಏಕೆಂದರೆ ಜನರು ಈ ಸಮಯದಲ್ಲಿ ದೊಡ್ಡ ಖರೀದಿಗಳನ್ನು ಮಾಡಲು ಇಷ್ಟಪಡುತ್ತಾರೆ.
ಹೊಸ ಮಾಡೆಲ್ ಬಂದಾಗ..
ದೀಪಾವಳಿ, ವಿಜಯದಶಮಿ ಹೊರತು ಪಡಿಸಿ ಹೊಸ ಮಾಡೆಲ್ಲಿನ ಕಾರು ಬಿಡುಗಡೆ ಮಾಡಿದಾಗ, ಅದರ ಹಳೆಯ ಮಾದರಿಯ ಬೆಲೆ ಕಡಿಮೆಯಾಗುತ್ತದೆ. ಹೊಸ ಮಾದರಿಯನ್ನು ಖರೀದಿಸಲು ನಿಮಗೆ ಮನಸ್ಸಿಲ್ಲದಿದ್ದರೆ ಅಥವಾ ಹೊಸ ಮಾಡೆಲ್ ಕಾರು ನಿಮಗೆ ದುಬಾರಿ ಎನಿಸಿದರೆ, ಅಂತಹ ಸಮಯದಲ್ಲಿ ಹಿಂದಿನ ಮಾದರಿಯ ಕಾರನ್ನು ಖರೀದಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಆಗ ನೀವು ಉತ್ತಮ ರಿಯಾಯಿತಿಯನ್ನು ಪಡೆಯುವ ಸಾಧ್ಯತೆಯಿದೆ.
ನವೆಂಬರ್ ಡಿಸೆಂಬರ್ ತಿಂಗಳು ಸೂಕ್ತ ಸಮಯವೇ..?
ಕಾರು ಖರೀದಿಸಲು ಭಾರತದಲ್ಲಿ ಅಕ್ಟೋಬರ್, ನವೆಂಬರ್ ತಿಂಗಳು ಸೂಕ್ತ ಸಮಯ. ಹೀಗಿದ್ದರೂ, ಡಿಸೆಂಬರ್ ತಿಂಗಳು ದಿ ಬೆಸ್ಟ್ ಎನ್ನುವುದಕ್ಕೆ ಕಾರಣಗಳೂ ಇವೆ. ಏಕೆಂದರೆ ಡಿಸೆಂಬರ್ ತಿಂಗಳ ಅಂತ್ಯಕ್ಕೆ ಕ್ರಿಸ್ ಮಸ್ ಇರುತ್ತದೆ. ಹೊಸ ಹೊಸ ಆಫರ್ ಬರುತ್ತವೆ. ಜೊತೆಗೆ ಹೊಸ ವರ್ಷದಲ್ಲಿ ಹೊಸ ಮಾದರಿಗಳಿಗೆ ಜಾಗವನ್ನು ನೀಡಲು ಡೀಲರ್‌ಶಿಪ್‌ಗಳು ತಮ್ಮ ಸ್ಟಾಕ್‌ಗಳನ್ನು ಕ್ಲಿಯರ್ ಮಾಡಲು ಬಯಸುತ್ತಾರೆ. ಆದ್ದರಿಂದ, ಈ ಸಮಯದಲ್ಲಿ ನೀವು ಉತ್ತಮ ಕೊಡುಗೆಗಳನ್ನು ಪಡೆಯಬಹುದು.