ಕಿಚ್ಚ ಸುದೀಪ್ ಸಿನಿಮಾ ಬಗ್ಗೆ ಅಪ್ʻಡೇಟ್ ಕೊಡಲ್ಲ. ಬರೀ ಕ್ರಿಕೆಟ್ ಬಗ್ಗೆ ಕೊಡ್ತಾರೆ. ಬಿಗ್ ಬಾಗ್ ಮಾಡ್ಕೊಂಡ್ ಇರ್ತಾರೆ ಅನ್ನೋದನ್ನ ಸೋಷಿಯಲ್ ಮೀಡಿಯಾದಲ್ಲಿ ಎಷ್ಟರಮಟ್ಟಿಗೆ ಲೇವಡಿ ಮಾಡ್ತಾರೆ ಅಂದ್ರೆ, ಎಲ್ಲವನ್ನೂ ಸ್ಪೋರ್ಟಿವ್ ಆಗಿ ತಗೊಳ್ಳೋ ಕಿಚ್ಚ ಸುದೀಪ್ ಕೂಡಾ ಬೇಸರಗೊಂಡಿದ್ದಾರೆ. ಅಷ್ಟೊಂದು ಲೇವಡಿ ಮಾಡಿದ್ದಾರೆ.
ಅಭಿಮಾನಿಗಳು ಸಿಟ್ಟು ಮಾಡಿಕೊಳ್ಳೊದಕ್ಕೂ ಕಾರಣ ಇದೆ. ಸುದೀಪ್ ಸಿನಿಮಾ ಬಂದಿದ್ದು 2022ರ ಜುಲೈನಲ್ಲಿ. ಅದು ವಿಕ್ರಾಂತ್ ರೋಣ. ಅಲ್ಲಿಗೆ ಒಂದೂವರೆ ವರ್ಷವಾಗಿದೆ. ಅದಾದ ಮೇಲೆ ಶುರುವಾಗಿರೋ ಮ್ಯಾಕ್ಸ್ ಚಿತ್ರದ ಅಪ್ʻಡೇಟ್ ಸಿಗುತ್ತಿಲ್ಲ. ಹೀರೋಯಿನ್ ಯಾರು, ಆರ್ಟಿಸ್ಟ್ʻಗಳು ಯಾರು ಅನ್ನೋದನ್ನ ಚಿತ್ರತಂಡ ಅಧಿಕೃತವಾಗಿ ಹೇಳ್ತಿಲ್ಲ. ಅದ್ಯಾಕ್ ಗುಟ್ಟು ಮಾಡ್ತಿದ್ದಾರೋ ಅರ್ಥವಾಗುತ್ತಿಲ್ಲ. ಇದರಿಂದ ಶುರುವಾಗಿರೋದೇ ಈ ರೀತಿಯ ಕಾಮಿಡಿ.. ಲೇವಡಿ.. ರಿಯಾಕ್ಷನ್ನುಗಳು. ಇವುಗಳಿಗೆಲ್ಲ ಕೊನೆಗೂ ಉತ್ತರ ಕೊಟ್ಟಿದ್ದಾರೆ ಸುದೀಪ್. ಆದರೆ.. ಕೊಟ್ಟಿರುವುದು ಮಾತ್ರ ಒಂದೇ ಅಪ್ʻಡೇಟ್. ಸಿನಿಮಾ ಚೆನ್ನಾಗಿ ಬರ್ತಾ ಇದೆ ಅನ್ನೋದು.
ಎಲ್ಲಾ ಸ್ನೇಹಿತರಿಗೆ ಶುಭೋದಯ, ಪ್ರೀತಿ ತುಂಬಿದ ಅಪ್ಪುಗೆ. ಅಪ್‌ಡೇಟ್ಸ್ ಬಗ್ಗೆ ಹರಿದು ಬರುತ್ತಿರುವ ಟ್ವೀಟ್‌ಗಳನ್ನು ನೋಡಿ ಖುಷಿಯಾಗುತ್ತದೆ. ಆದರೆ ಬೇರೆ ನಟರ ಸಿನಿಮಾಗಳು ಬಿಡುಗಡೆ ಆಗಿದೆ ಎಂದು ಅಥವಾ ಬೇರೆ ನಟರಿಗೆ ಪೈಪೋಟಿ ಕೊಡಬೇಕೆಂದು ಅಪ್‌ಡೇಟ್ ಕೊಡುವುದಕ್ಕೆ ಸಾಧ್ಯವಿಲ್ಲ. ಚಿತ್ರತಂಡ ಏನಾದರೂ ರಿಲೀಸ್ ಮಾಡಲು ಅಥವಾ ಘೋಷಿಸಲು ಸಿದ್ಧವಿದ್ದಾಗ ಮಾತ್ರ ಅಪ್‌ಡೇಟ್ ಕೊಡಲು ಸಾಧ್ಯ
ಇಂತಾದ್ದೊಂದು ಸ್ಟೇಟಸ್ ಹಾಕಿಕೊಳ್ಳೋ ಮೂಲಕ ಕಿಚ್ಚ ಸುದೀಪ್ ಬೇರೆಯದೇ ರೀತಿಯ ಅಪ್ʻಡೇಟ್ ಕೊಟ್ಟಿದ್ಧಾರೆ. ಮ್ಯಾಕ್ಸ್ ಚಿತ್ರದ ಅಪ್ʻಡೇಟ್ ಏನಾದರೂ ಇದ್ದರಷ್ಟೇ ಕೊಡಬೇಕು. ಇಲ್ಲದೇ ಹೋದರೆ ಏನು ಮಾಡೋದು ಅನ್ನೋದು ಸುದೀಪ್ ಪ್ರಶ್ನೆ.
ಇದೇ ವೇಳೆ ಬಿಗ್ ಬಾಸ್ ಮತ್ತು ಸಿಸಿಎಲ್ ಬಗ್ಗೆ ಲೇವಡಿ ಮಾಡಬೇಡಿ ಎಂದೂ ಕಿವಿಮಾತು ಹೇಳಿದ್ಧಾರೆ ಕಿಚ್ಚ. ಇದೇ ವೇಳೆ ಮ್ಯಾಕ್ಸ್ ಬಗ್ಗೆ ಅಪ್ʻಡೇಟ್ ಕೊಟ್ಟಿರುವ ಸುದೀಪ್ಮ್ಯಾಕ್ಸ್’ ಸಿನಿಮಾ ಚೆನ್ನಾಗಿ ರೂಪುಗೊಳುತ್ತಿದೆ. ನಾವು ಸಾಧ್ಯವಾದಷ್ಟು ಉತ್ತಮ ರೀತಿಯಲ್ಲಿ ನಿಮ್ಮನ್ನು ರಂಜಿಸಲು ಪ್ರಯತ್ನಿಸುತ್ತಿದ್ದೇನೆ. ಅದಕ್ಕೆ ನಮ್ಮ ಮೊದಲ ಆದ್ಯತೆ ಎಂದು ಟ್ವೀಟ್ ಮಾಡಿದ್ದಾರೆ.
ತಮಿಳು ನಿರ್ದೇಶಕ ವಿಜಯ್ ಕಾರ್ತಿಕೇಯನ್ ಮ್ಯಾಕ್ಸ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಕಲೈಪುಲಿ ಎಸ್. ತನು ನಿರ್ಮಾಣದ ಮ್ಯಾಕ್ಸ್ ಚಿತ್ರಕ್ಕೆ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಕೂಡಾ ಕೈ ಜೋಡಿಸಿದೆ. ಮ್ಯಾಕ್ಸ್ ಸಿನಿಮಾದಲ್ಲಿ ಅರ್ಜುನ್ ಮಹಾಕ್ಷಯ್ ಎನ್ನುವ ಖಡಕ್ ಪೊಲೀಸ್ ಆಫೀಸರ್ ಪಾತ್ರದಲ್ಲಿ ಸುದೀಪ್ ಬಣ್ಣ ಹಚ್ಚಿದ್ದಾರೆ.