ದೇವೇಗೌಡರ ಬಗ್ಗೆ ಹೆಚ್.ಟಿ.ಕೃಷ್ಣಪ್ಪ ಹೇಳಿದ್ದ ಭವಿಷ್ಯ ಏನು..? ಸಿದ್ಧರಾಮಯ್ಯ ಹೇಳಿದ ಹಳೇ ಸ್ಟೋರಿ..!
- ದೇವೇಗೌಡರ ಬಗ್ಗೆ ಹಲವರು ಭವಿಷ್ಯ ಹೇಳ್ತಾರೆ. ದೇವೇಗೌಡರೂ ಕೂಡಾ ಹಲವರಿಗೆ ಭವಿಷ್ಯ ಹೇಳ್ತಾರೆ. ರಾಜಕೀಯದಲ್ಲಿ ಕೆಲವು ನಾಯಕರ ಹಣೆ ಬರಹ ಬದಲಿಸಿದ ಖ್ಯಾತಿ ದೇವೇಗೌಡರಿಗೆ ಇದೆ. ಇಂತಹ ದೇವೇಗೌಡರ ಬಗ್ಗೆ ಹೆಚ್.ಟಿ.ಕೃಷ್ಣಪ್ಪ ಎಂಬ ನಾಯಕರು ಹೇಳಿದ್ದ ಭವಿಷ್ಯವನ್ನು ಸಿದ್ಧರಾಮಯ್ಯ ನೆನಪಿಸಿಕೊಂಡಿದ್ದಾರೆ. ಹಾಸನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಈ ಹಿಂದೆ ಹೆಚ್.ಟಿ ಕೃಷ್ಣಪ್ಪ ಆಡಿದ್ದ ಭವಿಷ್ಯವಾಣಿ ಒಂದನ್ನ ಉಲ್ಲೇಖಿಸಿರುವ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರ ವಿರುದ್ಧ ಮತ್ತೊಮ್ಮೆ ಆಕ್ರೋಶ ಹೊರಹಾಕಿದ್ದಾರೆ.
ಹಿಂದೆ ಒಕ್ಕಲಿಗ ನಾಯಕರಾಗಿದ್ದ ಹೆಚ್.ಟಿ ಕೃಷ್ಣಪ್ಪ, ಹೆಚ್.ಡಿ ದೇವೇಗೌಡರ ಬಗ್ಗೆ ನುಡಿದಿದ್ದ ಭವಿಷ್ಯವನ್ನು ಪ್ರಸ್ತಾಪಿಸಿ ಟಾಂಗ್ ಕೊಟ್ಟಿದ್ದಾರೆ. ಕೃಷ್ಣಪ್ಪ ಆಗಲೇ ಈ ಪಾಪದ ಹೊರೆಯನ್ನು ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಅದನ್ನೇ ಸಿದ್ದರಾಮಯ್ಯ ಸಮಾವೇಶದಲ್ಲಿ ಪ್ರಸ್ತಾಪಿಸಿ ಹೇಳಿದ್ದಾರೆ. ಹೆಚ್.ಟಿ ಕೃಷ್ಣಪ್ಪ 2010ರಲ್ಲಿ ಹೇಳಿ ಬರೆದಿದ್ದ ಪತ್ರವೂ ಈಗ ಸಿಕ್ಕಿದೆ.
2010ರಲ್ಲಿ ಬರೆದಿದ್ದ ಆ ಪತ್ರದಲ್ಲಿ..
ನಮಗೆಲ್ಲಾ ರಾಜಕೀಯ ವನವಾಸ ತಂದ ಹೆಚ್.ಡಿ ದೇವೇಗೌಡರಿಗೆ ತನ್ನ ದುರಂತವನ್ನು ತಾನೇ ನೋಡುವ ಕಾಲ ಬರುತ್ತದೆ. ಹೆಚ್.ಟಿ.ಕೃಷ್ಣಪ್ಪ
ಹೀಗೆಂದು ಹೆಚ್.ಟಿ ಕೃಷ್ಣಪ್ಪ ಅವರು ಹೇಳಿದ್ದರು. ಈಗ ಅವರು ಇಲ್ಲ. ಆದರೆ ಅವರು ಹೇಳಿದ್ದು ಸತ್ಯವಾಗುತ್ತಿದೆ. ನಾನು ಮಾತನಾಡಿದರೆ, ಸಿದ್ದರಾಮಯ್ಯ ಒಕ್ಕಲಿಗರ ವಿರುದ್ಧ ಎತ್ತಿಕಟ್ಟಿ ಬಿಡುತ್ತಿದ್ದರು. ಹೆಚ್.ಟಿ ಕೃಷ್ಣಪ್ಪ ಅವರು ಪಕ್ಕಾ ಒಕ್ಕಲಿಗ. ಅವರು ಹೇಳಿದ್ದು ಇದು ಎಂದಿರುವ ಸಿದ್ಧರಾಮಯ್ಯ . ನೀವು ಯಾರನ್ನು ಬೆಳೆಸಿದ್ದೀರಿ ಅಂತ ತಿವಿದಿದ್ದಾರೆ. ಒಕ್ಕಲಿಗ ನಾಯಕರಾಗಿದ್ದ ಕೃಷ್ಣಪ್ಪ ಆಗಲೇ ಈ ಪಾಪದ ಹೊರೆ ಹೊರಬೇಕಾಗುತ್ತದೆ ಎಂದು ದೇವೇಗೌಡರಿಗೆ ಹೇಳಿದ್ದರು. ಈಗ ಅವರ ಮಾತು ನಿಜವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ಅವರು, ಹೆಚ್.ಡಿ ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಪರೋಕ್ಷವಾಗಿ ಅತ್ಯಾಚಾರ ಪ್ರಕರಣದಲ್ಲಿ ಈಗಲೂ ಜೈಲಿನಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಜೈಲಿನಿಂದ ಜಾಮೀನು ಪಡೆದು ಹೊರಬಂದಿರುವ ಹೆಚ್.ಡಿ.ರೇವಣ್ಣ, ಸೂರಜ್ ರೇವಣ್ಣ, ಸುಪ್ರೀಂಕೋರ್ಟಿನಲ್ಲಿ ಬೇಲ್ ಪಡೆದಿರುವ ಭವಾನಿ ರೇವಣ್ಣ, ನಿಖಿಲ್ ಕುಮಾರಸ್ವಾಮಿಯ ಹ್ಯಾಟ್ರಿಲ್ ಸೋಲು, ಪತನದತ್ತ ಸಾಗುತ್ತಿರುವ ಜೆಡಿಎಸ್.. ಎಲ್ಲವನ್ನೂ ಪರೋಕ್ಷವಾಗಿಯೇ ನೆನಪಿಸಿದ್ದಾರೆ ಸಿದ್ದರಾಮಯ್ಯ.ಯಾರು ಈ ಹೆಚ್.ಟಿ.ಕೃಷ್ಣಪ್ಪ..?
ಪುಣ್ಯಕೋಟಿ ಕೃಷ್ಣಪ್ಪ ಎಂದೇ ಹೆಸರಾಗಿದ್ದವರು
ರಾಜಕೀಯದಲ್ಲಷ್ಟೇ ಅಲ್ಲದೆ, ಸಾಹಿತ್ಯ, ರಂಗಭೂಮಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ ನಾಯಕ
ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿದ್ದವರು
ಎರಡು ಬಾರಿ ಸಚಿವಗರಾಗಿಯೂ ಕಾರ್ಯ ನಿರ್ವಹಿಸಿದ್ದ ಹೆಚ್.ಟಿ.ಕೃಷ್ಣಪ್ಪ, ದಳದ ಪ್ರಮುಖ ನಾಯಕರಾಗಿದ್ದರು. 1986ರಲ್ಲಿ ಹೆಗಡೆ ಸಂಪುಟದಲ್ಲಿ ಆರೋಗ್ಯ ಖಾತೆ ಸಚಿವರಾಗಿದ್ದರು ಕೃಷ್ಣಪ್ಪ, ದಳ ಇಬ್ಭಾಗವಾದ ನಂತರ ರಾಜಕಾರಣದಿಂದ ದೂರ ಉಳಿದರು.
ತತ್ವ ಸಿದ್ಧಾಂತ ಬಿಡದ ಹೆಚ್.ಟಿ.ಕೃಷ್ಣ, ರಾಜಕಾರಣದಿಂದ ದೂರವಾದರಷ್ಟೇ ಅಲ್ಲ, ಸಿದ್ಧಾಂತದಲ್ಲಿ ರಾಜಿಯಾಗಲಿಲ್ಲ.
ಮಾಜಿ ಸಚಿವ ಹೆಚ್.ಟಿ.ಕೃಷ್ಣಪ್ಪ 2021ರಲ್ಲಿ ಇಹಲೋಕ ತ್ಯಜಿಸಿದ್ದ ಕೃಷ್ಣಪ್ಪ, ಈಗಿನ ರಾಜಕಾರಣಕ್ಕೆ ತದ್ವಿರುದ್ಧವಾಗಿದ್ದರು. ಅಷ್ಟೇ ಅಲ್ಲ, ನಾಗಮಂಗಲದಿಂದ ಮೂರು ಬಾರಿ ಗೆದ್ದಿದ್ದ ಕೃಷ್ಣಪ್ಪನವರ ಬಗ್ಗೆ ಮಂಡ್ಯದ ಯುವಜನತೆ ಮರೆತೇ ಹೋಗಿದ್ದಾರೆ. ವಯಸ್ಸಾಗಿರುವ ರಾಜಕಾರಣದಲ್ಲಿ ಆಕ್ಟಿವ್ ಆಗಿರುವವರಿಗಷ್ಟೇ ಈಗ ಕೃಷ್ಣಪ್ಪನವರ ಪರಿಚಯ ಇದೆ.