ಕಾಂಗ್ರೆಸ್ ಹೈಕಮಾಂಡ್‌ಗೆ 4 ರಾಜ್ಯಗಳ ಬಣ ಬಡಿದಾಟದ ಪಾಠ ಹೇಳಿದೆ. ಆದರೆ ಈ ಪಾಠ ಯಾರಿಗೆ ಹೇಳುತ್ತೆ ಅನ್ನೋದನು ಹೈಕಮಾಂಡ್ ನಿರ್ಧಾರ ಮಾಡವಢಕು. ಸಿದ್ದರಾಮಯ್ಯ V/S ಡಿಕೆಶಿ ಬಣ ಯುದ್ಧದಲ್ಲಿ ಕಾಂಗ್ರೆಸ್ ಹೈಕಮಾಂಡ್ ಎದುರು 4 ರಾಜ್ಯಗಳ ಸೋಲಿನ ಪಾಠಗಳಂತೂ ಇವೆ. ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡಿಗೆ ಸಿದ್ದು-ಡಿಕೆ ಗುದ್ದಾಟವೇ ಸಮಸ್ಯೆ.
ಕಾಂಗ್ರೆಸ್ಸಿಗೆ ಕಾಡುತ್ತಿದೆ 4 ರಾಜ್ಯಗಳ ದುರಂತ ಕಥೆ
ಯಾವ ಹೆಜ್ಜೆ ಇಡೋದಕ್ಕೂ 4 ರಾಜ್ಯಗಳ ಇತಿಹಾಸದ ಭಯ ಕಾಂಗ್ರೆಸ್ಸನ್ನು ಕಾಡುತ್ತಲೇ ಇದೆ. ಕಾಡುತ್ತಲೆ ಇರುತ್ತದೆ. ಇವೆಲ್ಲವೂ ತುಂಬಾ ವರ್ಷಗಳ ಹಿಂದೆ ನಡೆದಿರುವ ಇತಿಹಾಸಗಳೇನಲ್ಲ. ಒಟ್ಟಿನಲ್ಲಿ ಸಿದ್ದು-ಡಿಕೆ ಜಗ್ಗಾಟದ ಎದುರು ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಾಗುತ್ತಿದೆ.
ಮೊದಲ ಪಾಠ ರಾಜಸ್ತಾದದ್ದು : ರಾಜಸ್ತಾನದಲ್ಲಿ 2018ರಲ್ಲಿ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ವಾರ್ ಶುರುವಾಯ್ತು. ಆಗ ಸಚಿನ್ ಪೈಲಟ್ ನೇತೃತ್ವವೂ ಕಾಂಗ್ರೆಸ್ ಗೆಲುವಿಗೆ ಸಹಕರಿಸಿತ್ತು. ಆದರೆ ಗೆಹ್ಲೋಟ್ ಸಿಎಂ ಪಟ್ಟ ಬಿಡಲು ಒಪ್ಪಲಿಲ್ಲ. ಗೆಹ್ಲೋಟ್ ಅವರಿಗೆ ಸಿಎಂ ಆಗಲು ಅವಕಾಶ ಮಾಡಿಕೊಟ್ಟಿದ್ದ ಹೈಕಮಾಂಡ್, ಅಧಿಕಾರದ ಕೊನೆಯ ದಿನಗಳಲ್ಲಿ ಸಿಎಂ ಸ್ಥಾನ ಬಿಡಬೇಕು ಹಾಗೂ ಸಚಿನ್ ಪೈಲಟ್ ಅವರ ನೇತೃತ್ವದಲ್ಲಿ ಚುನಾವಣೆಗೆ ಹೋಗಬೇಕು ಎಂದು ಹೇಳಿತ್ತಾದರೂ, ಗೆಹ್ಲೋಟ್ ಒಪ್ಪಲಿಲ್ಲ.ಗೆಹ್ಲೋಟ್-ಪೈಲಟ್ ಸಮರದಲ್ಲಿ ಈಗ ರಾಜಸ್ತಾನದಲ್ಲಿ ಕಾಂಗ್ರೆಸ್ ಧೂಳೀಪಟವಾಗಿದೆ. ಆ ಹಂತದಲ್ಲಿ ಎಐಸಿಸಿ ಅಧ್ಯಕ್ಷರಾಗುವ ಆಫರ್ ಕೊಟ್ಟರೂ ಒಪ್ಪಿರಲಿಲ್ಲ. ಅಶೋಕ್ ಗೆಹ್ಲೋಟ್ ನಿರಾಕರಣೆ ನಂತರವೇ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದರು. ಇದು ಕೆಲವೇ ವರ್ಷಗಳ ಹಿಂದೆ ನಡೆದಿರುವ ಕಥೆ. ಈಗ ರಾಜಸ್ತಾನದಲ್ಲಿ ಬಿಜೆಪಿ ಸರ್ಕಾರ ಇದೆ.
ಎರಡನೇ ಪಾಠ ಮಧ್ಯಪ್ರದೇಶದ್ದು : ಮಧ್ಯಪ್ರದೇಶದಲ್ಲೂ ಕಮಲನಾಥ್, ಜ್ಯೋತಿರಾಧಿತ್ಯ ಸಿಂಧಿಯಾ ಸಮರದಿಂದಾಗಿ ಗೆದ್ದಿದ್ದ ಪಕ್ಷ ಅಧಿಕಾರ ಕಳೆದುಕೊಳ್ಳುವಂತಾಯ್ತು. ಮಧ್ಯಪ್ರದೇಶದಲ್ಲಿ ಬಿಜೆಪಿಗಿಂತ ಹೆಚ್ಚು ಸ್ಥಾನ ಗೆದ್ದಿದ್ದ ಕಾಂಗ್ರೆಸ್ ಅಧಿಕಾರಕ್ಕೇರಿತ್ತು. ಆದರೆ ಎರಡೂ ಪಕ್ಷಗಳ ನಡುವೆ ಅಂತರ ಹೆಚ್ಚಿರಲಿಲ್ಲ. ಆ ಹೊತ್ತಿಗೆ ಜ್ಯೋತಿರಾಧಿತ್ಯ ಸಿಂಧಿಯಾ ಬಿಜೆಪಿ ಸೇರಿ ಕೇಂದ್ರದಲ್ಲಿ ಸಚಿವರಾದರು. ಸಿಂಧಿಯಾ ಜೊತೆ ಕೆಲವರು ಬಿಜೆಪಿಗೆ ಹೋಗಿ ಕೈಗೆ ಸಿಕ್ಕಿದ್ದ ಅಧಿಕಾರ ಕೈತಪ್ಪಿತು. ಈಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಎಲ್ಲಿ ಎಂದು ಹುಡುಕುವ ಪರಿಸ್ಥಿತಿ ಇದೆ.
ಇನ್ನು ಛತ್ತೀಸ್‌ಘಡದಲ್ಲಿ ಭೂಪೇಶ್ ಬಘೇಲ್, ಸಿಂಗದೇವ ನಡುವಿನ ಜಗಳದಿಂದಾಗಿ ಟಿಕೆಟ್ ಹಂಚಿಕೆಯಲ್ಲೇ ಫೈಟ್ ಎದುರಾಯ್ತು. ಛತ್ತೀಸ್‌ಘಡದಲ್ಲಿ ಗೆಲ್ಲುವ ಹುಮ್ಮಸ್ಸಿನಲ್ಲಿದ್ದ ಕಾಂಗ್ರೆಸ್ ಹೀನಾಯವಾಗಿ ಸೋತಿತು. ಅಷ್ಟೇ ಅಲ್ಲ, ಹರಿಯಾಣದಲ್ಲೂ ಕೂಡಾ ಕಾಂಗ್ರೆಸ್ ಬಣ ಜಗಳವೇ ಸೋಲಿಗೆ ಕಾರಣವಾಗಿ, ಚುನಾವಣೆಗೆ ಮುನ್ನವೇ ನಡೆದ ಜಗಳ, ಕಾಂಗ್ರೆಸ್‌ನ್ನು ಸೋಲಿನ ಪಾತಾಳಕ್ಕೆ ನೂಕಿತು.
ಇದು ಕಾಂಗ್ರೆಸ್ಸಿಗೆ ಸ್ಥಳೀಯ ನಾಯಕರ ಬಣ ಬಡಿದಾಟ ಹೇಳುತ್ತಿರುವ ಪಾಠಗಳು. ಕಾಂಗ್ರೆಸ್‌ನಲ್ಲಿ ಬಣ ಬಡಿದಾಟಗಳು ನಡೆದಾಗಲೆಲ್ಲ ಕಾಂಗ್ರೆಸ್ ಸೋತಿದೆ. ಕಾಂಗ್ರೆಸ್ ಅಷ್ಟೇ ಅಲ್ಲ, ಇಬ್ಬರು ಪ್ರಬಲ ನಾಯಕರು ಇದ್ದಾಗ ಯಾವುದೇ ಪಕ್ಷ ಗೆದ್ದರೂ ನೆಮ್ಮದಿಯಾಗಿ ಆಡಳಿತ ಮಾಡಿದ ಉದಾಹರಣೆ ಇಲ್ಲ. ಸದ್ಯಕ್ಕೀಗ ಕಾಂಗ್ರೆಸ್ ಹೈಕಮಾಂಡಿಗೆ ಯಾರಿಗೆ ಬುದ್ದಿ ಹೇಳಬೇಕು ಎನ್ನುವುದೇ ದೊಡ್ಡ ಸಮಸ್ಯೆ.
ಸಿದ್ದರಾಮಯ್ಯ ಅವರನ್ನು ಕೆಳಗಿಳಿಯಿರಿ ಎಂದು ಹೇಳಬಹುದು. ಆದರೆ ಈ ಹಿಂದೆ ಹೀಗೆ ಹೇಳಿದಾಗ ಗೆಹ್ಲೋಟ್, ಕಮಲನಾಥ್ ಪ್ರಕರಣದಲ್ಲಿ ಹೈಕಮಾಂಡ್ ಸೂಚನೆ ಪಾಲನೆಯಾಗಿಲ್ಲ. ತಿರುಗಿಬಿದ್ದ ನಾಯಕರ ಎದುರು ಹೈಕಮಾಂಡ್ ಅಸಹಾಯಕವಾಗಿದೆ. ಕೊನೆಗೆ ಪಕ್ಷದ ಅಸ್ಥಿತ್ವವೇ ಬಲಿಯಾಗಿದೆ.
ಕರ್ನಾಟಕದಲ್ಲಿಯೂ ಕಾಂಗ್ರೆಸ್ಸಿಗೆ, ಭರವಸೆ ನೀಡಿದ್ದ ಸೋನಿಯಾ, ಪ್ರಿಯಾಂಕ ಅವರಿಗೆ ಎದುರಾಗಿರುವ ಸಮಸ್ಯೆಯೇ ಇದು. ಕೊಟ್ಟರೂ ಪ್ರಾಬ್ಲಂ. ಕೊಡದೇ ಹೋದರೂ ಪ್ರಾಬ್ಲಂ.