ರಾಜ್ಯದ 48 ರಾಜಕೀಯ ಮುಖಂಡರ ಸಿ.ಡಿ ತಯಾರಾಗಿದೆ. ನನ್ನ ಮೇಲೂ ಹನಿಟ್ರ್ಯಾಪ್ ಪ್ರಯತ್ನ ಆಗಿದೆ ಎಂದು ಸಹಕಾರಿ ಸಚಿವ ಕೆ ಎನ್ ರಾಜಣ್ಣ ಹೇಳುತ್ತಿದ್ದಂತೆಯೇ ವಿಧಾನಸಭೆ ಬೆಚ್ಚಿ ಬಿದ್ದಿದೆ. ಟೋಟಲ್ 48 ಶಾಸಕರು ಹನಿ ಟ್ರಾಪ್ ಆಗಿದ್ದಾರಂತೆ. ಅಂದಹಾಗೆ ಇದನ್ನು ಬಾಯಿ ಬಿಡಿಸಿದ್ದು ಮಾತ್ರ ಯತ್ನಾಳ್.
ರಾಜ್ಯದಲ್ಲಿ ಸಹಕಾರಿ ಸಚಿವರ ಮೇಲೆ ಹನಿಟ್ರ್ಯಾಪ್ ಮಾಡುವ ಪ್ರಯತ್ನ ಮಾಡಲಾಗಿದೆ. ಇದೊಂದು ಕೆಟ್ಟ ಸಂಸ್ಕೃತಿ. ಜನ ಪ್ರತಿನಿಧಿಗಳನ್ನು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ ಎಂದ ಯತ್ನಾಳ್ ಮಾತಿಗೆ ಮಾತನಾಡಿದ ಸಹಕಾರಿ ಸಚಿವ ಕೆಎನ್ ರಾಜಣ್ಣ ʻʻ ಯತ್ನಾಳ್ ನನ್ನ ಹೆಸರು ಪ್ರಸ್ತಾಪ ಮಾಡಿದ್ದಾರೆ. ಕರ್ನಾಟಕ ಸಿ.ಡಿ, ಪೆನ್‌ಡ್ರೈವ್‌ಗೆ ಫ್ಯಾಕ್ಟರಿ ಆಗಿದೆ ಅಂತ ಬಹಳ ಜನ ಹೇಳ್ತಾರೆ. ಬಹಳ ಗುರುತರ ಆರೋಪ ಇದು. ತುಮಕೂರಿನ ಇಬ್ಬರು ಪ್ರಭಾವಿ ಸಚಿವರು ಹನಿಟ್ರ‍್ಯಾಪ್ ನಲ್ಲಿ ಸಿಕ್ಕಿಕೊಂಡಿದ್ದಾರೆ ಅಂತ ಸುದ್ದಿಗಳು ಬರ್ತಿವೆ. ತುಮಕೂರಿನಲ್ಲಿ ಇರೋರು ನಾನು ಮತ್ತು ಪರಮೇಶ್ವರ್ ಮಾತ್ರ. ಸಿಡಿ, ಪೆನ್‌ಡ್ರೈವ್ 48 ಜನರ ಮೇಲೆ ಮಾಡಲಾಗಿದೆ. ಎಲ್ಲ ಪಕ್ಷದವರ ಮೇಲೂ ಸಿಡಿ, ಪೆನ್‌ಡ್ರೈವ್ ಇದೆ. ಕೆಲವರು ಈಗಾಗಲೇ ಸ್ಟೇ ತಗೊಂಡಿದ್ದಾರೆʼʼ ಅಂತೆಲ್ಲ ಹೇಳಿದ್ದಾರೆ.
ಯಾರು ಆ ಸುಂದರಿ..?
ಕೆಎನ್ ರಾಜಣ್ಣ ಮತ್ತು ಇನ್ನೊಬ್ಬ ಶಾಸಕ ರಾಜೇಂದ್ರ ಅವರನ್ನು ಟ್ರಾಪ್ ಮಾಡುವ ಪ್ರಯತ್ನ ನಡೆದಿತ್ತಂತೆ. ಮೊದಲು ತುಮಕೂರಿನಲ್ಲಿ, ನಂತರ ಮಧುಗಿರಿಯಲ್ಲಿ ಸುಂದರ ಯುವತಿಯೊಬ್ಬಳು ಲಾಯರ್ ಎಂದು ಹೇಳಿಕೊಂಡು ಭೇಟಿ ಮಾಡ್ತಿದ್ದರಂತೆ. ಸರ್.. ನಿಮ್ ಹತ್ತಿರ ಸ್ವಲ್ಪ ಪರ್ಸನಲ್ ಆಗಿ ಮಾತನಾಡ್ಬೇಕು ಎಂದು ಸ್ವಲ್ಪ ನಾಚಿಕೆ ಬಿಟ್ಟು ವರ್ತಿಸುತ್ತಿದ್ದಳಂತೆ. ಯಾಕೋ ಈ ಹುಡುಗಿ ಸ್ವಲ್ಪ ಓವರ್ ಆಗಿ ಆಡ್ತಿದ್ಯಲ್ಲ ಅಂದ್ಕೊಂಡು ಸುಮ್ಮನಾಗಿದ್ದ ಸಚಿವರು, ಇದು ಮತ್ತೆ ಮತ್ತೆ ಪುನರಾವರ್ತನೆ ಆದಾಗ ಕಪಾಳಕ್ಕೊಂದು ಬಾರಿಸಿದ್ದರಂತೆ. ಆ ಯುವತಿಯನ್ನು ಕರೆದು ತಂದಿದ್ದವರಿಗೂ ಮುಖಕ್ಕೆ ಉಗಿದು ಕಳಿಸಿದ್ದರಂತೆ. ಆಮೇಲೆ ಇನ್ಫರ್ಮೇಷನ್ ಕಲೆ ಹಾಕಿದ್ದವರಿಗೆ ಇದೊಂದು ಹನಿ ಟ್ರಾಪ್ ಎಂದು ಗೊತ್ತಾಯ್ತಂತೆ. ವಿಶೇಷ ಅಂದ್ರೆ ಅವರದ್ದೇ ಪಕ್ಷದ ನಾಯಕರೇ ಈ ಹನಿ ಟ್ರಾಪ್ ಮಾಡಿಸೋಕೆ ಟ್ರೈ ಮಾಡಿದ್ರಂತೆ. ಕೊನೆಗೆ ಎಲ್ಲ ಮಾಹಿತಿಯನ್ನೂ ಕಲೆ ಹಾಕಿದ್ದ ಕೆಎನ್ ರಾಜಣ್ಣ ಒಂದೇ ದಿನದಲ್ಲಿ ಮೂರು ಮೂರು ಬಾರಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ದೂರು ಕೊಟ್ಟಿದ್ದರಂತೆ.
ಕಾಂಗ್ರೆಸ್ ಹೈಕಮಾಂಡ್ ಗರಂ :
ಘಟನೆಯ ಬಗ್ಗೆ ತನಿಖೆ ನಡೆಸೋದಾಗಿ ಗೃಹ ಸಚಿವ ಪರಮೇಶ್ವರ್ ಹೇಳುತ್ತಿದ್ದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರಂತೂ ಫುಲ್ ರಿಪೋರ್ಟ್ ಕೇಳಿ ಪಡೆದಿದ್ದಾರೆ. ಖುದ್ದು ರಾಜಣ್ಣನವರಿಗೇ ಕರೆ ಮಾಡಿ ಮಾಹಿತಿ ಪಡೆದುಕೊಂಡಿದ್ದಾರೆ ಖರ್ಗೆ.
ಡಿಕೆ ಶಿವಕುಮಾರ್ ಹೆಸರು :
ಡಿಕೆ ಹೆಸರು ಹೇಳ್ತಿರೋದು ರಾಜರಾಜೇಶ್ವರಿ ನಗರ ಕ್ಷೇತ್ರದ ಶಾಸಕ ಮುನಿರತ್ನ. ಮುನಿರತ್ನ ಪ್ರಕಾರ ʻಡಿಕೆ ಬಳಿ ಒಂದು ಹನಿ ಟ್ರಾಪ್ ಟೀಂ ಇದೆ. ಮಿಡ್ ನೈಟ್ 2ಕ್ಕೆ ಮೀಟಿಂಗ್ ನಡೆಯುತ್ತೆ. ನಾನು ಅತ್ಯಾಚಾರ ಮಾಡಿಲ್ಲ. ಸುಖಾಸುಮ್ಮನೆ ಕಥೆ ಕಟ್ಟಿದ್ದಾರೆ. ನನಗೆ ನನ್ನ ಮೊಮ್ಮಕ್ಕಳಿಗೂ ಮುಖ ತೋರಿಸದಂತೆ ಆಗಿದೆ. ಡಿಕೆಗೂ ಕುಟುಂಬ ಇದೆ.ಮಕ್ಕಳಿದ್ದಾರೆ. ಅವರು ಇದನ್ನೆಲ್ಲ ಬಿಟ್ಟು ಜನಸೇವೆ ಮಾಡಲಿʼʼ ಎಂದೆಲ್ಲ ದೂರಿದ್ದಾರೆ.