ಯತ್ನಾಳ್ ಹೋರಾಟ ವಿಜಯೇಂದ್ರ ಯಡಿಯೂರಪ್ಪ ವಿರುದ್ಧ ಎನ್ನುವುದು ಗುಟ್ಟೇನಲ್ಲ. ಆದರೆ ಇದ್ದಕ್ಕಿದ್ದಂತೆ ಯತ್ನಾಳ್ ಹೋರಾಟಕ್ಕೆ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ. ಯಡಿಯೂರಪ್ಪ ಲಿಂಗಾಯತರೇ ಅಲ್ಲ ಅನ್ನೋದು ಯತ್ನಾಳ್ ಕೊಟ್ಟಿರೋ ಟ್ವಿಸ್ಟು. ಯಡಿಯೂರಪ್ಪ ಅವರು ಲಿಂಗಾಯತರು. ಮೊದ ಮೊದಲು ರಾಜ್ಯ ರೈತ ನಾಯಕರಾಗಿದ್ದ ಯಡಿಯೂರಪ್ಪ, ತಮ್ಮ ಜಾತಿಯ ಕಾರಣಕ್ಕೆ ಲಿಂಗಾಯತ ನಾಯಕ ಎಂದು ಗುರುತಿಸಿಕೊಂಡವರು. ಅಂತಹ ಯಡಿಯೂರಪ್ಪ ಲಿಂಗಾಯತರೇ ಅಲ್ಲ ಎಂದರೆ.. ಹೇಗೆ..?
ಮಾಜಿ ಸಿಎಂ ಯಡಿಯೂರಪ್ಪ ಲಿಂಗಾಯತರೇ ಅಲ್ಲ. ಅವರು ಬಳೆಗಾರ ಶೆಟ್ಟರು. ಅವರ ಹುಟ್ಟೂರಾದ ಮಂಡ್ಯದ ಬೂಕನಕೆರೆಗೆ ಹೋಗಿ ಕೇಳಿದರೆ, ನಿಜ ಗೊತ್ತಾಗುತ್ತದೆ ಎಂದಿದ್ದಾರೆ ಯತ್ನಾಳ್. ವೀರೇಂದ್ರ ಪಾಟೀಲ, ಜೆ.ಎಚ್.ಪಟೇಲ್ ನಂತರ ಸಮುದಾಯದಲ್ಲಿ ಯಾರೂ ನಾಯಕರು ಇರಲಿಲ್ಲ. ಜನರು ಅನಿವಾರ್ಯವಾಗಿ ಯಡಿಯೂರಪ್ಪ ಅವರನ್ನು ಒಪ್ಪಿದರು ಎಂದು ದೂರಿದ್ದಾರೆ ಬಸನಗೌಡ ಪಾಟೀಲ ಯತ್ನಾಳ್.
ಯಡಿಯೂರಪ್ಪ ಜಾತಿ ಯಾವುದು..?
ಯತ್ನಾಳ್ ಅವರ ಪ್ರಕಾರ ಯಡಿಯೂರಪ್ಪ ಲಿಂಗಾಯತರಲ್ಲ. ಬಳೆಗಾರ ಶೆಟ್ಟರು ಎನ್ನುವುದು ಯತ್ನಾಳ್ ಅವರ ವಾದ. ಯಡಿಯೂರಪ್ಪ ವೀರಶೈವ ಲಿಂಗಾಯತ ಸಮುದಾಯದ ಬಣಜಿಗ ಪಂಗಡಕ್ಕೆ ಸೇರಿದ್ದಾರೆ ಎನ್ನುವುದನ್ನು ಇದೂವರೆಗಿನ ದಾಖಲೆಗಳು ಹೇಳುತ್ತವೆ. ಮಂಡ್ಯದ ಬೂಕನಕೆರೆಯವರಾದ ಯಡಿಯೂರಪ್ಪನವರ ಮನೆ ದೇವರು ಎಡೆಯೂರು ಸಿದ್ಧಲಿಂಗೇಶ್ವರ. ಎಡೆಯೂರು ಸಿದ್ಧಲಿಂಗೇಶ್ವರ ಅವರು ಈ ಭಾಗದ ಬಹುತೇಕ ಲಿಂಗಾಯತರ ಮನೆ ದೇವರೇ ಆಗಿದ್ದಾರೆ. ಆದರೆ ಇದೀಗ ನೋಡಿದರೆ ಯತ್ನಾಳ್ ಅವರು ಹೊಸ ಹೇಳಿಕೆ ಕೊಡುತ್ತಿದ್ದಾರೆ.
ಯತ್ನಾಳ್ ಆರೋಪ ಕೇವಲ ಯಡಿಯೂರಪ್ಪ ಮೇಲಷ್ಟೇ ಅಲ್ಲ..!
ಯಡಿಯೂರಪ್ಪ ಲಿಂಗಾಯತರ ಹೆಸರಿನಲ್ಲಿ ಬಿಜೆಪಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಅನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನಮ್ಮ ಆಕ್ಷೇಪ ಇರುವುದು ಕುಟುಂಬ ರಾಜಕಾರಣದ ಬಗ್ಗೆ ಮಾತ್ರ. ನರೇಂದ್ರ ಮೋದಿ ಸಹ ಕುಟುಂಬ ರಾಜಕಾರಣ ಒಪ್ಪುವುದಿಲ್ಲ ಎಂದಿರುವ ಯತ್ನಾಳ್, ಕಾಂಗ್ರೆಸ್ಸಿನ ಶಾಮನೂರು ಶಿವಶಂಕರಪ್ಪ ಅವರನ್ನೂ ಎಳೆದು ತಂದಿದ್ದಾರೆ. ಇನ್ನು ತಮ್ಮನ್ನು ನಾಯಿ ನರಿ ಎಂದೆಲ್ಲ ಟೀಕೆ ಮಾಡಿರುವ ರೇಣುಕಾಚಾರ್ಯ ಅವರ ಮಾತಿಗೆ ಪ್ರತಿಕ್ರಿಯೆ ನೀಡಿರುವ ಯತ್ನಾಳ್ ಯಡಿಯೂರಪ್ಪ ಲಿಂಗಾಯತರ ಹೆಸರಿನಲ್ಲಿ ಬಿಜೆಪಿಯನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ಶಾಮನೂರು ಶಿವಶಂಕರಪ್ಪ ಕಾಂಗ್ರೆಸ್ ಅನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಾರೆ. ನಮ್ಮ ಆಕ್ಷೇಪ ಇರುವುದು ಕುಟುಂಬ ರಾಜಕಾರಣದ ಬಗ್ಗೆ ಮಾತ್ರ. ನರೇಂದ್ರ ಮೋದಿ ಸಹ ಕುಟುಂಬ ರಾಜಕಾರಣ ಒಪ್ಪುವುದಿಲ್ಲ ಎಂದು ಉತ್ತರ ಕೊಟ್ಟಿದ್ದಾರೆ.
ಲಿಂಗಾಯತರ ಸಭೆಗೆ ಕಂಪ್ಲೀಟ್ ಪ್ಲಾನ್ :
ಬಿಜೆಪಿ ರಾಜ್ಯಾಧಕ್ಷ್ಯ ಬಿ.ವೈ.ವಿಜಯೇಂದ್ರ ಸೂಚನೆ ಲೆಕ್ಕಿಸದೆ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ‘ವೀರಶೈವ ಲಿಂಗಾಯತ ಮಹಾಸಂಗಮ’ದ ಪೂರ್ವಸಿದ್ಧತಾ ಸಭೆಗಳು ನಡೆಯುತ್ತಿವೆ. .ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ ಸೇರಿ ಹತ್ತು ಜಿಲ್ಲೆಗಳ ವೀರಶೈವ ಲಿಂಗಾಯತ ಸಮುದಾಯದ ಮುಖಂಡರು, ವಿವಿಧ ಮಠಗಳ ಸ್ವಾಮೀಜಿಗಳು ಆಗಮಿಸುತ್ತಿದ್ದಾರೆ. ಯತ್ನಾಳ್ ಬಣಕ್ಕೆ ಸಡ್ಡು ಹೊಡೆಯಲು ಯಡಿಯೂರಪ್ಪ ಮತ್ತು ವಿಜಯೇಂದ್ರ ಪರ ವೀರಶೈವ ಲಿಂಗಾಯತ ಮಹಾಸಂಗಮ ಆಯೋಜಿಸಲು ನಿರ್ಧಾರ ಕೈಗೊಂಡಿರುವ ವಿಜಯೇಂದ್ರ ಬೆಂಬಲಿಗರು ಯೋಜನೆ ರೂಪಿಸುತ್ತಲೇ ಇದ್ಧಾರೆ. ಇತ್ತ ಯತ್ನಾಳ್ ಕೂಡಾ ಸಭೆ ನಡೆಸುತ್ತೇನೆ ಎಂದು ಚಾಲೆಂಜ್ ಹಾಕಿದ್ದಾರೆ.