ಎಕ್ಕ ಮಾರ್ ಮಾರ್ ಮಾರ್
ಎಕ್ಕಮಾರ್ ಮಾರ್ ಮಾರ್
ಎಕ್ಕ ಮಾರ್ ಮಾರ್ ಎಕ್ಕ ಮಾರ್
ಹೊಡಿ ಚಿನ್ನ ಹೊಡಿ ಚಿನ್ನ ಎರಡೇಟು
ಖಾಲಿ ಅದ್ರೆ ಆಗ್ಲಿ ಪಾಕೆಟ್ಟು
ಎಕ್ಕ ಮಾರ್ ಮಾರ್ ಮಾರ್
ಎಕ್ಕ ಬಿದ್ರೆ ಊರೂರ್ಗೆಲ್ಲ ಒಬ್ಬಟ್ಟು
ಇಲ್ಲಾ ಅಂದ್ರೆ ಮನೆ ಮುಂದೆ ಬ್ಯಾಂಡ್ ಸೆಟ್ಟು
ಪಕ್ಕಾ ಶೋ ಗುರು , ನೋಟು ಮಿಲಾಯ್ಸು
ಲೆಕ್ಕ ಇಟ್ಟರೆ ಆಟ ಉಡೀಸು
ವಸಿ ನೂಕು ವಸಿ ನೂಕು ವಸಿ ನೂಕು ಎಲೆನಾ
ಅಲ್ಲಿ ರಾಜ ಇಲ್ಲಿ ರಾಣಿ ಬಿಟ್ಟು ತೋರ್ಸು ಕಲೆ ನಾ
ಎಕ್ಕ ಮಾರ್ ಮಾರ್ ಮಾರ್ ಎಕ್ಕ ಮಾರ್ ಮಾರ್ ಮಾರ್ ಎಕ್ಕ ಮಾರ್ ಮಾರ್ ಮಾರ್ ಎಕ್ಕ ಮಾರ್
ಹಾಡು ಕೇಳುತ್ತಿದ್ದರೆ ನೋಡಬೇಕು ಎನ್ನಿಸುತ್ತದೆ. ಇದು ಎಕ್ಕ ಸಿನಿಮಾದ ಮಾಸ್ ಸಾಂಗ್. ಯುವ ಚಿತ್ರದಲ್ಲಿ ಒಂದೇ ಒಂದು ದೃಶ್ಯದಲ್ಲೂ ನಗದೆ ಇದ್ದ ಯುವ ಈ ಹಾಡಿನಲ್ಲಿ ಕುಣಿತದ ಜೊತೆಗೆ ನಗುವನ್ನೂ ತೋರಿಸ್ತಾರೆ.
ಆಟ ಚಿರ್ಕಿಕು ಚಿರ್ಕಿಕು
ಕಟ್ಫಾಕು ಹುಕುಮ್ಕು ಭರ್ತಿಕು
ಉನ್ನಿಸ್ಕು ಏಟು ಎರಡಾಕು ಮೂರಾಕು ನಾಲ್ಕಾಕು
ಅದ್ಕೊಂದು ಸ್ಟೆಪಾಕು ಬಾ.. ಬಾ..
ಆ ಜಿಂತಕ್.. ಆ ಜಿಂತಕ್.. ಆ ಜಿಂತಕ್.. ಆ ಜಿಂತಕ್
ಎಕ್ಕ ಸಿನಿಮಾದ ಮೊದಲ ಹಾಡು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಹುಟ್ಟುಹಬ್ಬಕ್ಕೆ ಬಿಡುಗಡೆ ಮಾಡಲಾಗಿದೆ. ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಎಕ್ಕ ಟೈಟಲ್ ಸಾಂಗ್ ಅನಾವರಣಗೊಂಡಿದೆ. ಎಕ್ಕಾ ಮಾರ್ ಮಾರ್ ಅಂತಾ ಯುವರಾಜ್ ಕುಮಾರ್ ಚಿಂದಿ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಬಾಬಾ ಭಾಸ್ಕರ್ ಕೊರಿಯೋಗ್ರಫಿಗೆ ಯುವ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ.
ಸುನಾಮಿ ತಿರುಪತಿ ಚಟ್ಟ ಪಾಂಚಾಲಿ
ರೇಡು ಕಡ್ಲೆಕಾಯಿ ನವಗ್ರಹ ಮಕ್ಕಳ್ತಾಯಿ
ಉನ್ನೀಸ್ ಕಟ್ಟು ಛಬ್ಬೀಸ್ ಕಟ್ಟು
ಉನ್ನೀಸ್ ಕಟ್ಟು ಛಬ್ಬೀಸ್ ಕಟ್ಟು
ಒಳ್ಳೆವ್ರೆಲ್ಲಾ ಒಳ್ಳೆವ್ರಲ್ಲಾ
ಜಾಕ್ ಹಾಕೋ ಕಾಲ ನಂಬಂಗೆ ಇಲ್ಲಾ
ಬಿಟ್ಟಿ ಶೋಕಿ ಭೂಮೀಗ್ ಭಾರ
ಇಷ್ಟ ಬಂದಂಗ್ ಇರೋದೆ ನಮಗ್ ಅಲಂಕಾರ
ನಾಗಾರ್ಜುನ್ ಶರ್ಮಾ ಕ್ಯಾಚಿ ಮ್ಯಾಚಿ ಪದಪೊಣಿಸಿ ಸಾಹಿತ್ಯ ಬರೆದಿದ್ದರೆ, ಚರಣ್ ರಾಜ್ ಮ್ಯೂಸಿಕ್ ಕಿಕ್, ರೋಹಿತ್ ಪದಕಿ, ಚರಣ್ ರಾಜ್ ಹಾಗೂ ಮಹಾಲಿಂಗ್ ವಿ ಎಂ ವಾಯ್ಸ್, ಯುವ ಎನರ್ಜಿ.. ಟೋಟಲ್ ಆಗಿ ಎಕ್ಕ ಟೈಟಲ್ ಟ್ರ್ಯಾಂಕ್ ಬೊಂಬಾಟ್ ಆಗಿ ಮೂಡಿಬಂದಿದೆ.
ಒಂದ್ ಕಾರ್ಡ್ಗ್ ಬಿದ್ರೆ ಚೂಟು
ಎರ್ಡೇನೆ ಕಾರ್ಡ್ಗ್ ಬಿದ್ರೆ ಪತ್ತಾಡು
ಸಾಲಾ ಮಾಡ್ದೆ ತಿನ್ನೋದ್ ಹೆಂಗೆ
ಹಾಳಾಗ್ ಹೋಗ್ದೆ ಕಲಿಯೋದ್ ಹೆಂಗೆ
ದೇವ್ರ್ನ್ ಬೈದೆ ಬದುಕೋದೆಂಗೆ
ಈ ಜೀವ್ನಾನೇ ಒಂದ್ ಕಾಗೆ
ಪಿಆರ್‌ಕೆ ಪ್ರೊಡಕ್ಷನ್ಸ್, ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಜಯಣ್ಣ ಫಿಲ್ಮ್ಸ್ ಒಟ್ಟಾಗಿ ‘ಎಕ್ಕ’ ಚಿತ್ರ ನಿರ್ಮಾಣ ಮಾಡುತ್ತಿವೆ. ಬಹಳ ಅದ್ಧೂರಿಯಾಗಿಯೇ ಈ ಆಕ್ಷನ್ ಥ್ರಿಲ್ಲರ್ ಚಿತ್ರ ಜೂನ್ 6ಕ್ಕೆ ಪ್ರೇಕ್ಷಕರ ಮುಂದೆ ಬರಲಿದೆ. ರೋಹಿತ್ ಪದಕಿ ಸಾರಥ್ಯದಲ್ಲಿ ಮೂಡಿ ಬರ್ತಿರುವ ಎಕ್ಕ ಸಿನಿಮಾದಲ್ಲಿ ಅತುಲ್ ಕುಲಕರ್ಣಿ, ಡೆಡ್ಲಿ ಆದಿತ್ಯಾ ಸೇರಿದಂತೆ ದೊಡ್ಡ ತಾರಗಣ ಚಿತ್ರದಲ್ಲಿ. ಸಂಜನಾ ಆನಂದ್, ಸಂಪದಾ ನಾಯಕಿಯಾಗಿ ಸಾಥ್ ಕೊಡುತ್ತಿದ್ದಾರೆ. ರೋಹಿತ್ ಪದಕಿ, ವಿಕ್ರಂ ಹತ್ವಾರ್ ಜೊತೆಗೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ನಿರ್ದೇಶನ ಮಾಡುತ್ತಿದ್ದಾರೆ. ಒಬ್ಬ ಮನುಷ್ಯ ಭೂಗತ ಜಗತ್ತಿಗೆ ತುತ್ತಾದಾಗ ಆತನಿಗೆ ಆಗುವ ಅನುಭವವನ್ನು ಈ ಚಿತ್ರದ ಮೂಲಕ ಹೇಳಲಾಗುತ್ತಿದೆಯಂತೆ.