ಬಂಗಾರ. ಚಿನ್ನ ಎಂದರೆ ಹೆಣ್ಣು ಮಕ್ಕಳಿಗಷ್ಟೇ ಅಲ್ಲ, ಎಂಥವರೂ ಬಾಯಿ ಬಾಯಿ ಬಿಡ್ತಾರೆ. ಎಷ್ಟು ಬಂಗಾರ ಇರುತ್ತದೆಯೋ.. ಅಷ್ಟರಮಟ್ಟಿಗೆ ಶ್ರೀಮಂತರು ಎಂದು ಅರ್ಥ. ಆದರೆ ಬಂಗಾರವನ್ನು ಖರೀದಿಸುವುದು ಎಂದರೆ ಸುಮ್ಮನೆ ಮಾತಲ್ಲ. ದರ ದುಬಾರಿ. ಅಯ್ಯೋ.. ಅವತ್ತು ಎಷ್ಟು ಕಮ್ಮಿ ಇತ್ತು ಗೊತ್ತಾ ಚಿನ್ನದ ರೇಟು. ಇಷ್ಟು ದುಡ್ಡು ಅವತ್ತು ಇದ್ದಿದ್ದರೆ.. ಎಂದು ಹಲುಬುವವರೇ ಜಾಸ್ತಿ. ಆದರೆ.. ಆವತ್ತಿನ ಕಾಲಕ್ಕೆ.. ದುಡಿಮೆಯೂ ಕಡಿಮೆ ಇತ್ತು. ಲಾಭ, ಸಂಬಳವೂ ಕಡಿಮೆ ಇತ್ತು ಎನ್ನುವುದನ್ನು ಮರೆಯುತ್ತಾರೆ. ಅದೆಲ್ಲ ಬೇರೆ ಕಥೆ ಬಿಡಿ.. ಈಗ ನಿಮ್ಮ ಬಳಿ ಎಷ್ಟೇ ದುಡ್ಡಿರಲಿ, ಬಂಗಾರ ಖರೀದಿ ಮಾಡಬಹುದು. ಒಂದ್ ರೂಪಾಯಿಗೂ ಖರೀದಿ ಮಾಡ್ಬಹುದು. ಅರೆ.. ಒಂದ್ ರೂಪಾಯಿಗೆ ಎಲ್ಲಿಂದ ಬರುತ್ರೀ ಬಂಗಾರ ಅನ್ನಬೇಡಿ. ಇದು ಡಿಜಿಟಲ್ ಬಂಗಾರ. ಮತ್ತು ಡೌಟೇ ಇಲ್ಲ, ಇದು 24 ಕ್ಯಾರೆಟ್ ಪ್ಯೂರ್ ಗೋಲ್ಡು.
ಡಿಜಿಟಲ್ ಗೋಲ್ಡ್ ಎಂದರೆ ಡಿಜಿಟಲ್ ಅಷ್ಟೇ, ಬಂಗಾರ ನಿಮ್ಮ ಹತ್ತಿರ ಇರಲ್ಲ, ಒಂದು ಡಾಕ್ಯುಮೆಂಟ್ ಇರುತ್ತೆ. ನೀವು ಅಲ್ಲಿ ಡಿಜಿಟಲ್ ಗೋಲ್ಡ್ ಖರೀದಿ ಮಾಡ್ಬಹುದು. ಬ್ಯಾಂಕುಗಳಲ್ಲಿ, ಗೂಗಲ್ ಪೇ, ಫೋನ್ ಪೇ, ಪೇಟಿಎಂ..ನಂತ ಪೇಮೆಂಟ್ ಆಪ್ಸ್ ಇದ್ದಾವಲ್ಲ, ಅಲ್ಲಿಯೇ ಇಂಥಾದ್ದೊಂದು ಡಿಜಿಟಲ್ ಗೋಲ್ಡ್ ಖರೀದಿಗೆ ಚಾನ್ಸ್ ಇದೆ. ಅಲ್ಲಿಯೇ ಆಪ್ ಡೀಟೈಲ್ಸ್ ನೋಡ್ತಾ ಹೋದ್ರೆ, ಕಣ್ಣಿಗೆ ಕಾಣಿಸುತ್ತೆ. ಉದಾಹರಣೆಗೆ ಗೂಗಲ್ ಪೇನಲ್ಲಿ ಗೋಲ್ಡ್ ಲಾಕರ್ ಅಂತಾ ಇರುತ್ತೆ. ಬ್ಯಾಂಕುಗಳ ಪ್ರೈವೇಟ್ ಆಪ್ʻಗಳಲ್ಲಿ ಕೂಡಾ ಗೋಲ್ಡ್ ಖರೀದಿಗೆ ಪ್ರತ್ಯೇಕ ಆಪ್ಷನ್ ಇದಾವೆ. ಅಲ್ಲಿ ಹೋಗಿ, ನಿಮ್ಮ ಹತ್ತಿರ ಎಷ್ಟಿದ್ಯೋ, ಅಷ್ಟು ದುಡ್ಡನ್ನ ಹಾಕಿ ಬಿಟ್ರಾಯ್ತು.
ಅಲ್ಲಿ ಗೋಲ್ಡ್ ಕಾಯಿನ್ ಇರುತ್ತೆ. ನಿಮ್ಮ ಗೋಲ್ಡ್ ಕಾಯಿನ್ ವ್ಯಾಲ್ಯೂ ಚಿನ್ನದ ರೇಟಿಗೆ ಬಂದಾಗ ಅದನ್ನ ಟ್ರಾನ್ಸ್ಫರ್ ಮಾಡಿ, ವೊರಿಜಿನಲ್ ಗೋಲ್ಡ್ ಪಡೀಬಹುದು.
ಇನ್ನು ಜಿಯೋ ಫೈನಾನ್ಸ್ ಅಪ್ಲಿಕೇಷನ್ನಲ್ಲಿ ಸ್ಮಾರ್ಟ್ಗೋಲ್ಡ್ ಯೋಜನೆ ಇದೆ. ಅಲ್ಲಿ ಕಸ್ಟಮರ್ಸ್ ಚಿನ್ನದ ಆಯ್ಕೆಗೆ ಎರಡು ಮಾರ್ಗಗಳಿವೆ. ಗ್ರಾಂ ಲೆಕ್ಕದಲ್ಲೂ ಖರೀದಿ ಮಾಡಬಹುದು. ಒಟ್ಟಾರೆ ಎಷ್ಟು ಹೂಡಿಕೆ ಮಾಡ್ತೀವಿ ಅಂತಾ ಹೇಳೀನೂ ಹೂಡಿಕೆ ಮಾಡ್ಬಹುದು. ಗ್ರಾಂ ಲೆಕ್ಕದಲ್ಲಿ ಡೆಪಾಸಿಟ್ ಮಾಡ್ತೀವಿ ಅಂದ್ರೆ ಮಿನಿಮಮ್ ಅರ್ಧ ಗ್ರಾಂಗೆ ಹೂಡಿಕೆ ಮಾಡ್ಬಹುದು. ಅಂದ್ರೆ 0.5 ಗ್ರಾಂ. 1 ಗ್ರಾಂ, 2 ಗ್ರಾಂ, 5 ಗ್ರಾಂ ಮತ್ತು 10 ಗ್ರಾಂಗಳಲ್ಲಿನೂ ಚಿನ್ನ ಸಿಗುತ್ತೆ. ಅದಕ್ಕೆ ಇನ್ಷೂರೆನ್ಸೂ ಇರುತ್ತೆ. ಸೇಫ್ಟಿನೂ ಇರುತ್ತೆ.
ಡಿಜಿಟಲ್ ಗೋಲ್ಡ್ಗಾಗಿ ಬಹುತೇಕರು ಹೂಡಿಕೆ ಮಾಡುತ್ತಿದ್ದಾರೆ. ಮೊದಲೇ ಹೇಳಿದಂತೆ 1 ರೂಪಾಯಿಯಿಂದ ಪ್ರಾರಂಭವಾಗಿ 2 ಲಕ್ಷದವರೆಗೂ ಹೂಡಿಕೆ ಮಾಡಬಹುದಾಗಿದೆ. ಇದರ ಮೂಲಕ ಚಿನ್ನ ಕಳ್ಳತನದ ಅಪಾಯವನ್ನು ತಪ್ಪಿಸಬಹುದಾಗಿದೆ. ಇನ್ನು ಡಿಜಿಟಲ್ ಚಿನ್ನವನ್ನು ಖರೀದಿಸುವಾಗ ಗ್ರಾಹಕರು 24 ಕ್ಯಾರೆಟ್ ಚಿನ್ನವನ್ನು ಪಡೆಯುತ್ತಾರೆ. . ಜಿಯೋ ಫೈನಾನ್ಸ್ ಅಪ್ಲಿಕೇಷನ್ನಲ್ಲಿ ನೀವು ಬಯಸಿದಾಗ ಚಿನ್ನದ ನೇರ ಮಾರುಕಟ್ಟೆ ಬೆಲೆಗಳನ್ನು ನೋಡಬಹುದು. ಸ್ಮಾರ್ಟ್ ಗೋಲ್ಡ್ ಡಿಜಿಟಲ್ ಚಿನ್ನವನ್ನು ಖರೀದಿಸಲು ಅನುಕೂಲಕರ, ಸುರಕ್ಷಿತ ಮತ್ತು ಅರ್ಥಪೂರ್ಣ ಮಾರ್ಗವೂ ಹೌದು.