ಲಿಯೋ. ತಮಿಳಿನ ವಿಜಯ್ ಅಭಿನಯದ ಲಿಯೋ ಅಬ್ಬರಿಸಿದ್ದ ಲೆಕ್ಕ ನೋಡಿದ್ರೆ ದಾಖಲೆಗಳೆಲ್ಲ ಧೂಳೀಪಟ ಆಗ್ಬೇಕಿತ್ತು. ಕೈಥಿ, ವಿಕ್ರಂನಂತಹ ಹಿಟ್ ಕೊಟ್ಟ ಲೋಕೇಶ್ ಕನಗರಾಜ್, ಮತ್ತೊಮ್ಮೆ ವಿಜಯ್ ಅವರಿಗೆ ಹಿಟ್ ಕೊಡೋದ್ರಲ್ಲಿ ಫೇಲ್ ಆಗಿದ್ದಾರೆ. ಮಾಸ್ಟರ್ ಆವರೇಜ್ ಎನಿಸಿಕೊಂಡಿತ್ತು. ಇದೀಗ ಲಿಯೋ ಡಿಸಾಸ್ಟರ್ ಪಟ್ಟ ಪಡೆದುಕೊಂಡಿದೆ. ವಿಜಯ್ ಅವರ ಕಟ್ಟರ್ ಫ್ಯಾನ್ಸ್ ಬಿಟ್ಟರೆ, ಉಳಿದವರಿಗೆ ಲಿಯೋ ಇಷ್ಟವಾಗಿಲ್ಲ.
ಇನ್ನು ಸಿಂಪಲ್ಲಾಗ್ ಹೇಳ್ಬೇಕಂದ್ರೆ ಘೋಸ್ಟ್ ಗೆದ್ದಿದೆ. ಶಿವಣ್ಣನಿಗೆ ಕಣ್ಣಲ್ಲೇ ಡೈಲಾಗ್ ಹೇಳಿಸಿರುವ ಶ್ರೀನಿ ಒಂದು ಥ್ರಿಲ್ಲರ್ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ಹೇಳಿ ಗೆದ್ದಿದ್ದಾರೆ. ಇದು ಸಿನಿಮಾ. ನೋ ಲಾಜಿಕ್ ಎನ್ನುವ ಥಿಯರಿಗೆ ಬದ್ಧರಾಗಿರುವ ಶ್ರೀನಿ, ನೋಡುಗರಿಗೆ ಕ್ಷಣ ಕ್ಷಣವೂ ಥ್ರಿಲ್ ಕೊಡ್ತಾರೆ. ಜನ ರಿಲ್ಯಾಕ್ಸ್ ಆಗುವುದು ಇಂಟರ್ʻವೆಲ್ಲಿನಲ್ಲಿ ಮತ್ತು ಚಿತ್ರದ ಕ್ಲೈಮಾಕ್ಸ್ನಲ್ಲಿ. ಅಷ್ಟರಮಟ್ಟಿಗೆ ನೋಡುತ್ತಿದ್ದಷ್ಟೂ ಹೊತ್ತು ಪ್ರೇಕ್ಷಕರನ್ನು ಆವರಿಸಿಕೊಳ್ಳುತ್ತಾರೆ ಶಿವಣ್ಣ.
ಕಲೆಕ್ಷನ್ ಎಷ್ಟು ಎಂಬ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಆದರೂ ವೇದ ಚಿತ್ರಕ್ಕೆ ಸಿಕ್ಕ ಓಪನಿಂಗ್ʻಗಿಂತಲೂ ಒಳ್ಳೆಯ ಓಪನಿಂಗ್ ಪಡೆದುಕೊಂಡಿದೆ. ಬೆಂಗಳೂರಿನಲ್ಲಿ ಎಲ್ಲ ಥಿಯೇಟರುಗಳೂ ಹೌಸ್ʻಫುಲ್ ಆಗಿವೆ. ಇನ್ನು ಉತ್ತರ ಕರ್ನಾಟಕದ ಮಾರ್ಕೆಟ್ಟು ಶಿವಣ್ಣನ ಏರಿಯಾ. ಅಂದಹಾಗೆ ಘೋಸ್ಟ್ʻಗೆ ಎದುರಾಗಿ ರಿಲೀಸ್ ಆಗಿದ್ದ ಲಿಯೋ ಕುಯ್ಯೋ ಮರ್ರೋ ಅಂತಿದೆ.
ತಮಿಳಿನ ವಿಜಯ್ ಅಭಿನಯದ ಲಿಯೋಗೆ ಬೆಂಗಳೂರಿನಲ್ಲಿಯೇ ಘೋಸ್ಟ್ ಚಿತ್ರಕ್ಕಿಂತಲೂ ಹೆಚ್ಚು ಸ್ಕ್ರೀನ್ ಸಿಕ್ಕಿತ್ತು. ಶಿವಣ್ಣ ಸಿನಿಮಾ ರಿಲೀಸ್ ಆದಾಗ್ಲೂ ಹಿಂಗಾ ಎನ್ನುತ್ತಿದ್ದವರು ಅಸಹಾಯಕರಾಗಿದ್ದರು. ಏಕೆಂದರೆ ಅದು ಪಕ್ಕಾ ಬ್ಯುಸಿನೆಸ್. ಈಗ ನೋಡಿದರೆ ಲಿಯೋ ಚಿತ್ರಕ್ಕೆ ನೆಗೆಟಿವ್ ವಿಮರ್ಶೆಗಳೇ ಹೆಚ್ಚಾಗಿವೆ. ಚಿತ್ರ ನೋಡಿದವರು ಲಿಯೋ ಮಿಯಾಂವ್ ಅಂತಿದ್ದಾರೆ. ಘೋಸ್ಟ್ ಕ್ಲಿಯರ್ ಆಗಿ ವಿನ್ನರ್ ಆಗಿದೆ.
ನೋ ಡೈಲಾಗ್ಸ್.. ಕಣ್ಣಲ್ಲೇ ಬೆಂಕಿ.. ಕಥೆ.. ಹೇಗಿದೆ..?
ಇಡೀ ಸಿನಿಮಾದಲ್ಲಿ ಶಿವರಾಜ್ಕುಮಾರ್ ಅವರು ಫುಲ್ ಮಾಸ್ ಅವತಾರದಲ್ಲಿ ಮಿಂಚಿದ್ದಾರೆ. ಘೋಸ್ಟ್ ಸಿನಿಮಾಗೆ ಮೇಜರ್ ಪ್ಲಸ್ ಪಾಯಿಂಟ್ ಶಿವಣ್ಣ. ಶ್ರೀನಿ ಹೇಳಿದ ಕಥೆಯಲ್ಲಿ ಸಾಕಷ್ಟು ಟ್ವಿಸ್ಟ್ಗಳಿವೆ. ಕೇವಲ 48 ಗಂಟೆಗಳಲ್ಲಿ ನಡೆಯುವ ಕಥೆ. ಸಸ್ಪೆನ್ಸ್ ಥ್ರಿಲ್ಲರ್ ಮಾದರಿಯಲ್ಲಿದೆ. ರೆಗ್ಯುಲರ್ ಶೈಲಿ ಮಾಸ್ ಕಮರ್ಷಿಯಲ್ ಸಿನಿಮಾಗಳಿಗಿಂತ ಹೊರತಾಗಿ ಬೇರೆಯದೇ ಮ್ಯಾನರಿಸಂ ಶಿವಣ್ಣ ಪಾತ್ರದಲ್ಲಿದೆ. ಜೈಲ್ ಹೈಜಾಕ್ ಮಾಡುವ ಕಥೆ ಚಿತ್ರದ್ದು. ಕಣ್ಣಲ್ಲೇ ಜಾಸ್ತಿ ಮಾತಾಡ್ತಾರೆ. ಡೈಲಾಗ್ಸ್ ಕಮ್ಮಿ. ಮಲಯಾಳಂ ನಟ ಜಯರಾಮ್ ಅವರು ಪೊಲೀಸ್ ಅಧಿಕಾರಿಯಾಗಿ ಅಗ್ರೆಸ್ಸಿವ್ ಆಗಿದ್ದಾರೆ. ಕೆಜಿಎಫ್ ಖ್ಯಾತಿಯ ಅರ್ಚನಾ ಜೋಯಿಸ್ ಪತ್ರಕರ್ತೆಯಾಗಿದ್ದಾರೆ. ಕಥೆಗೆ ಟ್ವಿಸ್ಟ್ ನೀಡುವುದು ಅನುಪಮ್ ಖೇರ್ ಪಾತ್ರ. ಬೀರ್ಬಲ್ ಸಿನಿಮಾದ ಲಾಯರ್ ಮಹೇಶ್ ದಾಸ್ ಆಗಿ, ಡೈರೆಕ್ಟರ್ ಶ್ರೀನಿ ಬರ್ತಾರೆ. ಹ್ಯಾಂಡ್ಸ್ಕಫ್ ಫೈಟ್ ಹೊಸತನದಿಂದ ಕೂಡಿದೆ. ಶಿವಣ್ಣನ ಡಿ-ಏಜಿಂಗ್ ಲುಕ್ ಮಾತ್ರ ಫ್ಯಾನ್ಸ್ಗೆ ಹಬ್ಬ. ಸಂಭಾಷಣೆ ಕೂಡ ಪಂಚಿಂಗ್ ಆಗಿದೆ. ಪಾರ್ಟ್ 2ಗೆ ಕೊಟ್ಟಿರುವ ಟ್ವಿಸ್ಟ್ ಚೆನ್ನಾಗಿದ್ದು, ‘ಘೋಸ್ಟ್ 2’ ಕುತೂಹಲ ಉಳಿಸಿಕೊಳ್ಳುವಲ್ಲಿ ಶ್ರೀನಿ ಸಕ್ಸಸ್ ಆಗಿದ್ದಾರೆ.