ನಮ್ಮ ಭಾರತೀಯ ಆಹಾರ ಪದ್ಧತಿಯಲ್ಲಿ ತುಪ್ಪಕ್ಕೆ ವಿಶೇಷ ಸ್ಥಾನ ಇದೆ. ಅಡುಗೆ ಯಾವುದೇ ಇರಲಿ.. ತುಪ್ಪ ಇರಲೇಬೇಕು. ವೆಜ್ ಅಥವಾ ನಾನ್ ವೆಜ್, ಎರಡಕ್ಕೂ ತುಪ್ಪ ಬೇಕು. ತರಕಾರಿಗಳನ್ನು ಬಳಸಿ ತಯಾರು ಮಾಡುವ ಆಹಾರ ಪದಾರ್ಥಗಳಿಂದ ಹಿಡಿದು ಹಲ್ವಾ ಅಥವಾ ಇನ್ನಿತರ ಸಿಹಿ ಖಾದ್ಯಗಳನ್ನು ತಯಾರಿಸುವವರೆಗೂ ತುಪ್ಪ ಬಳಸ್ತಾರೆ. ಹಸು, ಎಮ್ಮೆಗಳ ತುಪ್ಪದಲ್ಲಿ ವಿಟಮಿನ್ ಅಂಶಗಳು, ಖನಿಜಾಂಶಗಳು ಆರೋಗ್ಯಕರ ಕೊಬ್ಬು ಮತ್ತು ಪ್ರೋಟೀನ್ ಹೇರಳವಾಗಿರುತ್ತದೆ. ಈ ಎಲ್ಲ ಕಾರಣದಿಂದಲೇ ತುಪ್ಪ ತಿಂದರೆ ಶಕ್ತಿ ಬರುತ್ತದೆ ಎಂದು ನಂಬುತ್ತಾರೆ ಜನ.
ಅಪ್ಪಟ ತುಪ್ಪದಲ್ಲಿ ಪ್ರೊಟೀನ್ ವಿಟಮಿನ್ ಬಿ, ಆರೋಗ್ಯಕರ ಕೊಬ್ಬು ಹಾಗೂ ಖನಿಜಾಂಶಗಳ ಪ್ರಮಾಣ ಹೇರಳವಾಗಿರುತ್ತವೆ. ಆದರೆ ಮಾರುಕಟ್ಟೆಯಲ್ಲಿ ವಿವಿಧ ರಾಸಾಯನಿಕಗಳನ್ನು ಮಿಶ್ರಣ ಮಾಡಿದ ತುಪ್ಪ ಹೇರಳವಾಗಿ ಕಂಡು ಬರುತ್ತಿದೆ ಮತ್ತು ಇದೊಂದು ವ್ಯವಹಾರದ ರೂಪದಲ್ಲಿ ವ್ಯಾಪಕವಾಗಿ ಹರಡಿದೆ. ಎಲ್ಲ ಓಕೆ, ಕಲಬೆರಕೆ ತುಪ್ಪ ಕಂಡು ಹಿಡಿಯೋದು ಹೇಗೆ..? ಮನೆಯಲ್ಲೇ ಒಂದು ಪುಟ್ಟ ಲ್ಯಾಬ್ ಮಾದರಿಯಲ್ಲಿ ಟೆಸ್ಟ್ ಮಾಡಬಹುದು.
ಮನೆಯಲ್ಲೊಂದು ಮಿನಿ ಲ್ಯಾಬ್ :
ಒಂದು ಟೆಸ್ಟ್ ಟ್ಯೂಬ್ ನಲ್ಲಿ 1 ಎಂಎಲ್ ಕರಗಿದ ತುಪ್ಪವನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಎಂಎಲ್ ಕಾನ್ಸನ್ಟ್ರೇಟ್ ಮಾಡಿದ ಹೈಡ್ರೋ ಕ್ಲೋರಿಕ್ ಆಸಿಡ್ ದ್ರಾವಣವನ್ನು ಸೇರಿಸಿ. ಈಗ ಇದಕ್ಕೆ ಅರ್ಧ ಟೀ ಚಮಚ ಸಕ್ಕರೆ ಹಾಕಿ ಎರಡು ನಿಮಿಷಗಳ ಕಾಲ ಚೆನ್ನಾಗಿ ತಿರುಗಿಸಿ. ಆನಂತರ ಇದನ್ನು ಸ್ವಲ್ಪ ಹೊತ್ತು ಹಾಗೆ ಬಿಡಿ. ತುಪ್ಪ ಒಂದು ವೇಳೆ ಕಲಬೆರಕೆ ಆಗಿದ್ದರೆ, ಕೆಂಪು ಅಥವಾ ಗುಲಾಬಿ ಬಣ್ಣದ ಆಮ್ಲದ ಪದರ ಕಂಡು ಬರುತ್ತದೆ.
ಫುಡ್ ಸೇಫ್ಟಿ ಅಂಡ್ ಸ್ಟ್ಯಾಂಡರ್ಡ್ ಅಥಾರಿಟಿ ಆಫ್ ಇಂಡಿಯಾ ಹೇಳುವ ಪ್ರಕಾರ ಹೈಡ್ರೋಕ್ಲೋರಿಕ್ ಆಸಿಡ್ ಸಕ್ಕರೆ ಅಂಶವನ್ನು ಗ್ಲುಕೋಸ್ ಮತ್ತು ಫ್ರಕ್ಟೋಸ್ ಆಗಿ ಬದಲಿಸುತ್ತದೆ. ಡೀ ಹೈಡ್ರೇಷನ್ ಆದಾಗ ಫಿನಾಲ್ ಜೊತೆ ರಿಯಾಕ್ಟ್ ಆಗಿ ವೆಜಿಟೇಬಲ್ ಆಯಿಲ್ ಅಥವಾ ಎಳ್ಳೆಣ್ಣೆ ಜೊತೆಗೆ ಬಣ್ಣ ಬದಲಿಸುತ್ತದೆ. ವನಸ್ಪತಿ ಮತ್ತು ಹೈಡ್ರೋಜನೇಷನ್ ಆದಂತಹ ವೆಜಿಟೇಬಲ್ ಆಯಿಲ್ ಗಳಲ್ಲಿ ಟ್ರಾನ್ಸ್ ಕೊಬ್ಬಿನ ಅಂಶಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ. ಇದು ಕ್ಯಾನ್ಸರ್ ಮತ್ತು ಹೃದಯ ರಕ್ತನಾಳದ ಕಾಯಿಲೆಗಳನ್ನು ಹೆಚ್ಚು ಮಾಡುವ ಸಾಧ್ಯತೆ ಇರುತ್ತದೆ.
ಇನ್ನೂ ಕೆಲವು ಮಾಡೆಲ್ಲುಗಳಿವೆ. ಟೆಸ್ಟಿಂಗುಗಳಿವೆ. ಅವುಗಳನ್ನೆಲ್ಲ ನೋಡಿಕೊಂಡೇ ತುಪ್ಪ ಖರೀದಿ ಮಾಡಬೇಕು. ಎಲ್ಲದಕ್ಕಿಂತ ಉತ್ತಮ ಎಂದರೆ ಮನೆಯಲ್ಲೇ ತುಪ್ಪ ಮಾಡಿಕೊಳ್ಳೋದು. ತುಪ್ಪ ಮಾಡಿಕೊಳ್ಳೋದು ಹೇಗೆ ಅನ್ನೋದು ಗೊತ್ತಿರುತ್ತದೆ ಅಲ್ಲವಾ..?