ಕಿಚ್ಚ ಸುದೀಪ್ ಹುಟ್ಟುಹಬ್ಬದ ಸ್ಪೆಷಲ್ ಆಗಿ ಮ್ಯಾಕ್ಸ್ ಹಾಡಿನ ಲಿರಿಕಲ್ ಸಾಹಿತ್ಯ ರಿಲೀಸ್ ಆಗಿದೆ. ರಿಲೀಸ್ ಆಗಿರೋದು ಲಿರಿಕಲ್ ಸಾಂಗ್ ಆದರೂ.. ಮಧ್ಯೆ ಮಧ್ಯೆ ಬರುವ ಮೇಕಿಂಗ್ ಸೀನ್, ಮ್ಯಾಕ್ಸ್ ಚಿತ್ರದ ಹಾಡಿನ ವೈಭವ, ಅದ್ಧೂರಿತನಕ್ಕೆ ಸಾಕ್ಷಿ ನುಡಿಯುತ್ತವೆ.
ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ
ಬುದ್ಧಿ ನೆಟ್ಟಿದ್ರೆ ಹಂಗೆ ಸೈಡ್ ಜಾರೋ
ಉರಿಯೋ ಜ್ವಾಲಾಮುಖಿ ಮುಂದೆ ನಿರ್ ಯಾರೋ
ವಾರ್ನಿಂಗ್ ವಾರಂಟ್ ಇಲ್ಲ ಹಂಗೆ ಡೈರೆಕ್ಟ್ ವಾರೋ..
ಪಂಜ ಎತ್ತಿ ಬಿಟ್ಟ ಅಂದ್ರೆ
ಒಂದೂವರೆ ಟನ್ ಬಾಸ್
ರಟ್ಟೇಲ್ ಬಾಳಾ ಬಲ
ಎದೆಲ್ ಇದೆ ದಮ್ ಬಾಸ್
ಸುಕ್ಕ ಸುಕ್ಕ ಸುಕ್ಕ ಸುಕ್ಕ
ಸಿಕ್ಕಾಪಟ್ಟೆ ಬ್ಯಾಡ್ ಆಸ್
ಮುಖ ಮೂತಿ ಸೀಳೋಗುತ್ತೆ
ಇಕ್ತಾನ್ ಬಂದು ಮಾಡ್ ಮಾಕ್ಸ್
ಮಾಕ್ಸ್ ಮಾಕ್ಸಿಮಮ್ ಮಾಸ್
ಮಾಸಲಿ ಮಾಸಿಗೆ ಬಾಸ್
ಭಯ ಭೀತಿ ಗೊತ್ತೆ ಇಲ್ಲ
ಯಾರೇ ಬಂದ್ರೂ ಬಿಂದಾಸ್
ಪುಂಡರ ಹಿಗ್ಗ ಮುಗ್ಗಾ
ರುಬ್ಬೋದೇನೇ ಟೈಂ ಪಾಸ್
ಸುಕ ಸುಕ್ಕ ಸುಕ್ಕ ಸುಕ್ಕ
ಸಿಕ್ಕಾಪಟ್ಟೆ ಬ್ಯಾಡ್ ಆಸ್ ಮುಖ
ಮೂತಿ ಸೀಳೋಗುತ್ತೆ
ಇಕ್ತಾನ್ ಬಂದು ಮಾಡ್ ಮ್ಯಾಕ್ಸ್
ಮಾಕ್ಸ್ ಮಾಕ್ಸಿಮಮ್ ಮಾಸ್
ಮಾಸಲಿ ಮಾಸಿಗೆ ಬಾಸ್
ಹಾಡಿನ ಸಾಹಿತ್ಯ ಅನೂಪ್ ಭಂಡಾರಿ ಅವರದ್ದು. ಸಂಗೀತ ಅಜನೀಶ್ ಲೋಕನಾಥ್ ಅವರದ್ದು. ಚೇತನ್ ಗಂಧರ್ವ ಹಾಡಿರುವ ಹಾಡು ಅಭಿಮಾನಿಗಳಿಗಂತೂ ಹಬ್ಬ ಮಾಡಿಸುತ್ತಿದೆ. ಅಪ್ಪಂಗೆ ಹುಟ್ಟಿದ್ರೆ ತೊಡೆ ತಟ್ಟಿ ಬಾರೋ’ ಎನ್ನುವ ಮೊದಲ ಸಾಲು ಅಭಿಮಾನಿಗಳ ಹಾಟ್ ಫೇವರಿಟ್ ಆಗಿಬಿಟ್ಟಿದೆ. ಒರಿಜಿನಲ್ ಸಾಂಗ್‌ನಲ್ಲಿ ಕೂಡ ಇದೇ ಸಾಹಿತ್ಯ ಇರುತ್ತಾ ಅಥವಾ ಬದಲಾಗುತ್ತಾ ಕಾದು ನೋಡಬೇಕಿದೆ. ವಿಜಯ್ ಕಾರ್ತಿಕೇಯನ್ ನಿರ್ದೇಶನದ ‘ಮ್ಯಾಕ್ಸ್’ ಸಿನಿಮಾ ಬಹಳ ನಿರೀಕ್ಷೆ ಮೂಡಿಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ತೆರೆಗೆ ಬರಲಿದೆ. ಎಲ್ಲ ಭಾಷೆಗಳಲ್ಲೂ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ.
ವಿ ಕ್ರಿಯೇಷನ್ಸ್ ಮತ್ತು ಕಿಚ್ಚ ಕ್ರಿಯೇಷನ್ಸ್ ಬ್ಯಾನರಿನಲ್ಲಿ ಮೂಡಿ ಬರುತ್ತಿರುವ ಚಿತ್ರಕ್ಕೆ ವಿಜಯ್ ಕಾರ್ತಿಕೇಯ ಡೈರೆಕ್ಟರ್. ಇದು ಸುದೀಪ್ ಅವರ 46ನೇ ಸಿನಿಮಾ. ಚಿತ್ರದಲ್ಲಿ ಸುದೀಪ್ ಎದುರು ವರಲಕ್ಷ್ಮಿ ಶರತ್ ಕುಮಾರ್, ಸಂಯುಕ್ತ ಹೊರನಾಡು, ರವಿಶಂಕರ್, ಪ್ರಮೋದ್ ಶೆಟ್ಟಿ, ಸುಕೃತಾ ವಾಗ್ಲೇ ಮೊದಲಾದವರೆಲ್ಲ ನಟಿಸಿದ್ದಾರೆ.
ಮ್ಯಾಕ್ಸ್ ಚಿತ್ರದಲ್ಲಿ ಕಿಚ್ಚ ಸುದೀಪ್ ಒಬ್ಬ ಪೊಲೀಸ್ ಇನ್ಸ್‌ಪೆಕ್ಟರ್ ಆಗಿರುತ್ತಾರೆ. ಹೆಸರು ಅರ್ಜುನ್ ಮಹಾಕ್ಷಯ್. ಲಾ ಆ್ಯಂಡ್ ಆರ್ಡರ್ ಫಾಲೋ ಮಾಡುವಾಗ ಸಸ್ಪೆಂಡ್ ಆಗಿರುತ್ತಾರೆ. ಎರಡು ತಿಂಗಳ ಬಳಿಕ ಹೊಸ ಸ್ಟೇಷನ್‌ಗೆ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಆದರೆ ಮಿನಿಸ್ಟರ್ ಒಬ್ಬರ ಮಗ ಪೊಲೀಸ್ ಡಿಪಾರ್ಟ್‌ಮೆಂಟ್ ಮೇಲೆ ದೌರ್ಜನ್ಯ ಎಸಗುತ್ತಿರುತ್ತಾನೆ. ಮುಂದೆ.. ಮುಂದೆ ನಡೆಯೋ ಕಥೆಯನ್ನ ಥಿಯೇಟರಲ್ಲಿ ನೋಡಿ ಅಂತಾದ್ದಾರೆ ಸ್ಟೋರಿ ಲೀಕ್ ಮಾಡಿರೋ ಫ್ಯಾನ್ಸ್. ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಭರ್ಜರಿ ಸಾಹಸಗಳನ್ನ ಮಾಡಿದ್ದಾರೆ. ಸಾಹಸ ನಿರ್ದೇಶಕ ಚೇತನ್ ಡಿಸೋಜಾ ಈ ಸಾಹಗಳನ್ನ ಕಂಪೋಸ್ ಮಾಡಿದ್ದಾರೆ. ವಿಶೇಷವಾಗಿ ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಭರ್ಜರಿ ಆ್ಯಕ್ಷನ್‌ಗಳೇ ಇವೆ.