ಯುವರಾಜ್ ಕುಮಾರ್ ಮೊದಲ ಸಿನಿಮಾ ʻಯುವʼ ನಿರೀಕ್ಷಿತ ಯಶಸ್ಸು ಗಳಿಸಲಿಲ್ಲ. ಅತ್ತ ನಿರ್ಮಾಪಕರಿಗೆ ನಷ್ಟವನ್ನೂ ಮಾಡಲಿಲ್ಲ. ಸ್ವಲ್ಪ ಮಟ್ಟಿಗೆ ಲಾಭವನ್ನೇ ಕೊಟ್ಟಿತ್ತು ಯುವ. ಈಗ ಅವರ 2ನೇ ಸಿನಿಮಾ ಚಿತ್ರೀಕರಣವಾಗುತ್ತಿದೆ. ಎಕ್ಕ. ‘ಎಕ್ಕ’ ಚಿತ್ರದ ಪೋಸ್ಟರ್, ಟೀಸರ್ ಝಲಕ್ ನೋಡುತ್ತಿದ್ದರೆ ಇದು ಪಕ್ಕಾ ರಾ ಆಕ್ಷನ್ ಸಿನಿಮಾ ಎನ್ನುವುದು ಗೊತ್ತಾಗುತ್ತಿದೆ. ಟೈಟಲ್‌ನಿಂದಲೇ ಸಿನಿಮಾ ನಿರೀಕ್ಷೆ ಹುಟ್ಟುಹಾಕಿದೆ. ಆ ನಿರೀಕ್ಷೆಗಳ ಕಾರಣಕ್ಕಾಗಿಯೇ ಚಿತ್ರ ಭರ್ಜರಿ ಬಿಸಿನೆಸ್ ಕೂಡಾ ಮಾಡುತ್ತಿದೆ.
ಸದ್ಯ ‘ಎಕ್ಕ’ ಚಿತ್ರದ ಆಡಿಯೋ ರೈಟ್ಸ್ ಬಗ್ಗೆ ಸುದ್ದಿ ಬಂದಿದೆ. ಆನಂದ್ ಆಡಿಯೋ ಸಂಸ್ಥೆಗೆ ರೈಟ್ಸ್ ಮಾರಾಟವಾಗಿದೆ. ಈ ವಿಚಾರವನ್ನು ಅಧಿಕೃತವಾಗಿ ಚಿತ್ರತಂಡ ಹಂಚಿಕೊಂಡಿದೆ. ‘ಎಕ್ಕ’ ಕಾಂಬಿನೇಷನ್ ಭಾರೀ ಕುತೂಹಲ ಮೂಡಿಸಿದೆ. ಅದಕ್ಕೆ ತಕ್ಕಂತೆ ಆಡಿಯೋ ರೈಟ್ಸ್ ಡೀಲ್ ಕುದುರಿಸಲಾಗಿದೆ. ಅಂದಹಾಗೆ ಚಿತ್ರಕ್ಕೆ ಚರಣ್ ರಾಜ್ ಟ್ಯೂನ್ ಹಾಕುತ್ತಿದ್ದಾರೆ.
ಚಿತ್ರದಲ್ಲಿ ಇಬ್ಬರು ನಾಯಕಿಯರಿದ್ದು ಸಂಪದಾ ಅದರಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ 3 ಸಿನಿಮಾಗಳಲ್ಲಿ ಆಕೆ ನಟಿಸಿದ್ದಾರೆ. ಕಿರುತೆರೆ ಧಾರಾವಾಹಿಯಲ್ಲಿ ಸಹ ಮಿಂಚಿದ್ದಾರೆ.
ಎಕ್ಕಾ ಮಾರ್.. ಜೋರಾಗಿ ಸೌಂಡ್ ಬಾರ್.. ಎಂದು ಟ್ವೀಟ್ ಮಾಡಿ ಖುಷಿ ಹಂಚಿಕೊಂಡಿದೆ ಕೆಆರ್‌ಜಿ ಸ್ಟುಡಿಯೋಸ್. ಇತ್ತೀಚೆಗೆ ಪುನೀತ್ ರುದ್ರನಾಗ್ ‘ಎಕ್ಕ’ ತಂಡ ಸೇರಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಕಾಲ ಚಿತ್ರೀಕರಣದಲ್ಲಿ ಭಾಗಿ ಆಗಿದ್ದಾರೆ. ಸಿದ್ದಾಪುರ ಸುತ್ತಾಮುತ್ತ ಚಿತ್ರದ ದೃಶ್ಯಗಳನ್ನು ಸೆರೆ ಹಿಡಿಯಲಾಗುತ್ತಿದೆ. ‘ರತ್ನನ್ ಪ್ರಪಂಚ’ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ರೋಹಿತ್ ಪದಕಿ ‘ಎಕ್ಕ’ ಚಿತ್ರದ ಸಾರಥ್ಯ ವಹಿಸಿದ್ದಾರೆ. ಧನಂಜಯ್ ನಟನೆಯ ‘ಉತ್ತರಕಾಂಡ’ ಚಿತ್ರ ಶುರು ಮಾಡಿದ್ದ ರೋಹಿತ್ ಸದ್ಯ ಅದನ್ನು ಪಕ್ಕಕ್ಕಿಟ್ಟಿದ್ದಾರೆ. ನವೆಂಬರ್ ೨೮ರಿಂದ ಶೂಟಿಂಗ್ ಶುರುವಾಗಿದೆ.
ಎಕ್ಕ’ ಒಬ್ಬ ಯುವಕನ ಕಥೆ. ಭೂಗತ ಲೋಕದವರ ದೌರ್ಜನ್ಯಕ್ಕೊಳಗಾದ ಹುಡುಗ ಹೇಗೆ ಮಾಫಿಯಾವನ್ನು ಮಟ್ಟ ಹಾಕುತ್ತಾನೆ ಅನ್ನೋದು ಕಥಾಹಂದರ. ನಾಯಕ ನಟ ಯುವ ರಾಜ್ಕುಮಾರ್ ಸಿನಿಮಾಗಾಗಿ ಕಿವಿ ಚುಚ್ಚಿಸಿದ್ದಾರೆ. ಇನ್ನು ಚಿತ್ರದ ನಿರ್ಮಾಣಕ್ಕೆ ಕನ್ನಡದ ಪ್ರತಿಷ್ಠಿತ ಸಿನಿಮಾ ನಿರ್ಮಾಣ ಸಂಸ್ಥೆಗಳಾದ ಪಿ.ಆರ್.ಕೆ ಪ್ರೊಡಕ್ಷನ್ಸ್, ಜಯಣ್ಣ ಫಿಲಂಸ್ ಹಾಗೂ ಕೆ.ಆರ್.ಜಿ.ಸ್ಟುಡಿಯೋಸ್ ಒಂದಾಗಿವೆ.
ಕಾಶ್ಮೀರ, ಬೆಂಗಳೂರು, ಮೈಸೂರು, ದೆಹಲಿ, ಕೋಲ್ಕತ್ತಾ, ಮುಂಬೈ ಸೇರಿದಂತೆ ಹಲವು ಸ್ಥಳಗಳಲ್ಲಿ ಚಿತ್ರದ ಶೂಟಿಂಗ್ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದೆ. ಯುವ ರಾಜ್ಕುಮಾರ್ ಜೋಡಿಯಾಗಿ ಯುವ ನಟಿ ಸಂಪದಾ ಅಭಿನಯಿಸುತ್ತಿದ್ದಾರೆ. ಇವರ ಜೊತೆಗೆ ಅತ್ತುಲ್ ಕುಲಕರ್ಣಿ, ಶ್ರುತಿ ಕೃಷ್ಣ, ರಾಹುಲ್ ದೇವ್ ಶೆಟ್ಟಿ ಸೇರಿದಂತೆ ಸಾಕಷ್ಟು ಕಲಾವಿದರು ಅಭಿನಯಿಸಲಿದ್ದಾರೆ. ಸಾಮಾನ್ಯವಾಗಿ ಸಿನಿಮಾ ಬಿಡುಗಡೆಯಾಗಿ ಆ ಚಿತ್ರದ ನಟನ ಹೇರ್ ಸ್ಟೈಲ್ ಅಥವಾ ಬಟ್ಟೆಗಳು ಟ್ರೆಂಡ್ ಆಗುತ್ತವೆ. ಆದ್ರೆ ಎಕ್ಕ ಸಿನಿಮಾ ಶೂಟಿಂಗ್ ಹಂತದಲ್ಲೇ ಸಖತ್ ಸೌಂಡ್ ಮಾಡುತ್ತಿದೆ.