ಐಎಎಸ್ ರೋಹಿಣಿ ಸಿಂಧೂರಿ ಮತ್ತು ಐಪಿಎಸ್ ಡಿ.ರೂಪಾ ಫ್ಯಾಮಿಲಿ ಫೈಟ್ ವಿಷಯದಲ್ಲಿ ರೋಹಿಣಿ ಪರ ಅವರ ಇಡೀ ಕುಟುಂಬ ನಿಂತಿದೆ. ರೋಹಿಣಿಯವರ ಪತಿ ಬಹಿರಂಗವಾಗಿಯೇ ಪತ್ನಿಯ ಪರ ನಿಂತಿದ್ದು, ಕಾನೂನು ಹೋರಾಟಕ್ಕೂ ಇಳಿದಿದ್ದಾರೆ. ರೋಹಿಣಿ ಸಿಂದೂರಿ ಪತಿ ಸುಧೀರ್ ರೆಡ್ಡಿ ಬಾಗಲಕುಂಟೆ ಪೊಲೀಸರಿಗೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಸುಧೀರ್ ರೆಡ್ಡಿ ದೂರಿನ ಅನ್ವಯ ಪಿಟಿಷನ್ ಎನ್.ಸಿ.ಆರ್. ದಾಖಲು ಮಾಡಿಕೊಂಡಿರುವ ಪೊಲೀಸರು ವಿಚಾರಣೆ ಶುರು ಮಾಡಿದ್ದಾರೆ. ಪತ್ನಿಯ ಖಾಸಗಿ ಪೋಟೋ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಾಕಿರುವ ಬಗ್ಗೆ ದೂರು ನೀಡಿರುವ ಸುಧೀರ್ ರೆಡ್ಡಿ, ಒಬ್ಬ ಸರ್ಕಾರಿ ಅಧಿಕಾರಿಯ ಗೌರವಕ್ಕೆ ಧಕ್ಕೆ ಮತ್ತು ಪೋಟೋ ಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇನ್ನೂ ಕೆಲವೂ ಪೋಟೋಗಳು ಇವೆ ಅಂತ ಮಾಧ್ಯಮದ ಮುಂದೆ ಹೇಳಿದ್ದಾರೆ. ನನ್ನ ಪತ್ನಿಯ ಫೋನಲ್ಲಿ ಇರೋ ಪೋಟೋಗಳು ಅವರಿಗೆ ಸಿಕ್ಕಿದ್ದು ಹೇಗೆ? ನನ್ನ ಪತ್ನಿಯ ಫೋನ್ ಹ್ಯಾಕ್ ಮಾಡಿ ಫೋಟೊ ತೆಗೆದುಕೊಂಡಿದ್ದಾರೆ. ಇಗಾಗಿ ಕೇಸ್ ದಾಖಲಿಸಿ ತನಿಖೆ ಮಾಡಬೇಕು ಅಂತ ದೂರು ನೀಡಿದ್ದಾರೆ.
ರೋಹಿಣಿ ಸಿಂಧೂರಿ ಪತಿ ಸುಧೀರ್ ರೆಡ್ಡಿ ದೂರಿನ ಪ್ರಕಾರ, ರೂಪಾ ಶೇರ್ ಮಾಡಿರುವ ಡಿಲೀಟೆಡ್ ಮೆಸೇಜ್ ಫೋಟೋದಲ್ಲಿ ರೋಹಿಣಿ ಸಿಂಧೂರಿ ಅವರ ಪೋನ್ ನಂಬರ್ ಕಾಣಿಸಿತ್ತು. ಆದರೆ +91 ಇರಲಿಲ್ಲ. ಸೇವ್ ಮಾಡಿಲ್ಲದೇ ಇದ್ದಾಗ +91 ಬರಲ್ಲ. ಸೇವ್ ಮಾಡಿದ್ದರೆ ವಾಟ್ಸಪ್ನಲ್ಲಿ +91 ಕಾಣಿಸುತ್ತೆ ಅನ್ನೋದು ಸುಧೀರ್ ರೆಡ್ಡಿ ವಾದ.
ರೋಹಿಣಿ ಸಿಂಧೂರಿ ಪತಿ ಹೇಳಿದ್ದೇನು?
ಡಿ. ರೂಪಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಫಾಲೋವರ್ಸ್ ಇದ್ದಾರೆ. ಅವರು ಪ್ರಚಾರ ಪಡೆಯಲು ಈ ರೀತಿ ಮಾಡುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಕಾನೂನು ರೀತಿಯಲ್ಲಿ ಹೋರಾಟ ಮಾಡುತ್ತೇವೆ. ನಾನು ಕನ್ನಡಿಗ ನಾನು ಭಾರತಿಯ. ಆಂಧ್ರಕ್ಕೂ ನಮಗೂ ಸಂಬಂಧ ಇಲ್ಲ. ನಮ್ಮದು ಸುಶಿಕ್ಷಿತ ಕುಟುಂಬವಾಗಿದ್ದು, ನಮ್ಮ ಕುಟುಂಬದ ಬಗ್ಗೆ ಎಲ್ಲ ಮಾತನಾಡುತ್ತಿದ್ದಾರೆ. ರೋಹಿಣಿ ಸಿಂಧೂರಿಯ ಫೋಟೋಗಳೆಲ್ಲವೂ ಸಹಜ ಫೋಟೋಗಳಾಗಿದೆ. ನಾನು ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದು ಅಮೆರಿಕದಲ್ಲಿ ಉದ್ಯೋಗದಲ್ಲಿದ್ದೆ. ತಂದೆ ತಾಯಿ ಇಲ್ಲೇ ಇರುವ ಕಾರಣ ನಾನು ಉದ್ಯೋಗ ತೊರೆದು ಬಂದಿದ್ದೇನೆ. ಬ್ಲೂಟೂತ್ ಮೂಲಕ ಹ್ಯಾಕ್ ಮಾಡಿ ಫೋಟೋಸ್‍ಗಳನ್ನು ತಗೆದುಕೊಂಡಿರುವ ಬಗ್ಗೆ ಅನುಮಾನ ಇದೆ ಎಂದಿದ್ದಾರೆ ಸುಧೀರ್ ರೆಡ್ಡಿ.
ಡಿ.ಕೆ ರವಿ ಬಗ್ಗೆ ನಾನು ಮಾತನಾಡಲ್ಲ. ಮೃತಪಟ್ಟವರ ಬಗ್ಗೆ ಈಗ ಮಾತನಾಡುವುದು ಸರಿಯಲ್ಲ. ನನಗೂ ಸಂಸ್ಕಾರ ಗೊತ್ತಿದೆ. ನಮ್ಮ ತಂದೆಯವರು 50 ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲಿನಿಂದಲೂ ನಮ್ಮ ಆಸ್ತಿಗಳು ಇಲ್ಲಿವೆ. ರೋಹಿಣಿ ಅವರನ್ನು ಮದುವೆಯಾಗುವ ಮೊದಲೇ ನಮ್ಮ ಕುಟುಂಬ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುಕೊಂಡು ಬಂದಿತ್ತುಎಂದಿರುವ ಸುಧೀರ್ ರೆಡ್ಡಿ, ಪತ್ನಿಯ ಪರ ಬಲವಾಗಿ ನಿಂತಿದ್ದಾರೆ.
ಮನೆಗೆ ರೋಹಿಣಿ ಸಿಂಧೂರಿ ಹಣ ಕೊಟ್ಟಿಲ್ಲ : ಮಧುಸೂಧನ್ ರೆಡ್ಡಿ. ಸಿಂಧೂರಿ ಪತಿಯ ಸೋದರ?
ಸುಧೀರ್ ರೆಡ್ಡಿ ಸಹೋದರ ಮಧುಸೂಧನ ರೆಡ್ಡಿ ಕೂಡಾ ಸಹೋದರನ ಪತ್ನಿಯ ಪರವಾಗಿದ್ದಾರೆ. ರೋಹಿಣಿ ಸಿಂಧೂರಿ ಕಟ್ಟುತ್ತಿದ್ದಾರೆ ಎನ್ನಲಾದ ಸೈಟ್ ನಮ್ ತಾಯಿ ಹೆಸರಲ್ಲಿ ಇದೆ. ನಾನು ಇರೋದು ಅಮೆರಿಕದಲ್ಲಿ. ಅಲ್ಲಿ 20 ವರ್ಷದಿಂದ ಇದೀನಿ. ನಾನು ಅಮೆರಿಕದ ಪ್ರಜೆ. ಸಾಕಷ್ಟು ಎನ್.ಆರ್.ಐ. ಫ್ರೆಂಡ್ಸ್ ಇದ್ದಾರೆ. ಮನೆಗೆ ಬೇಕಾದ ವಸ್ತುಗಳನ್ನು ಇಟಲಿ, ಬ್ರೆಜಿಲ್ ಇಂದ ತರಿಸಿದ್ದೇವೆ. ಅಮೆರಿಕದಲ್ಲಿ ನಾನು ಕೂಡ ಶಾಪಿಂಗ್ ಮಾಡಿದ್ದೇನೆ. ಹೋಂ ಥಿಯೇಟರ್ ತರಿಸಿದ್ಧೇನೆ. ನನ್ ಬಳಿ ಎಲ್ಲಾ ದಾಖಲೆಗಳಿದೆ ಬೇಕಾದ್ರೆ ತೋರುಸ್ತಿನಿ. ನಮ್ ತಂದೆ ಕೂಡಾ ಇನ್ವೆಸ್ಟ್ ಮೆಂಟ್ ಮಾಡಿದ್ದಾರೆ. ರೋಹಿಣಿ ನಮ್ಮ ಫ್ಯಾಮಿಲಿಯವರು ಅವರ ಬಗ್ಗೆ ಹೆಮ್ಮೆ ಇದೆ. ಅವ್ರ ಮಂಡ್ಯ, ಮೈಸೂರು, ಹಾಸನದಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ಇಲ್ಲಿ ಕಟ್ಟುತ್ತಿರುವ ಮನೆ ಕುಟುಂಬದ್ದು. ಎಲ್ಲರೂ ಸೇರಿ ಹಣ ಹಾಕಿ ಕಟ್ಟಿಸುತ್ತಿದ್ದೇವೆ. ಈ ಮನೆ ಕಟ್ಟುವುದಕ್ಕೆ ರೋಹಿಣಿ ಹಣ ಕೊಟ್ಟಿಲ್ಲ. ಈ ಮನೆ ಬಗ್ಗೆ ಬೇಕಾದ್ರೆ ಏನ್ ಬೇಕಾದ್ರೂ ತನಿಖೆ ಮಾಡ್ಲಿ ನಾವು ಬೇಡ ಅನ್ನಲ್ಲ. 2018 ರಲ್ಲಿ ಮನೆ ಕಟ್ಟೋಕೆ ಶುರು ಮಾಡಿದ್ವಿನಾನು ನನ್ ತಮ್ಮ ಇಬ್ರು ಶೇರ್ ಮಾಡ್ಕೊಂಡು ಮನೆ ಕಟ್ಟುತ್ತಿದ್ದೇವೆ ಎಂದಿದ್ದಾರೆ ಸುಧೀರ್ ರೆಡ್ಡಿ.
ರೂಪಾ ವಿರುದ್ಧ ನಮ್ಮ ಇಡೀ ಕುಟುಂಬ ಹೋರಾಡಲಿದೆ : ಸಿಂಧೂರಿ ಕುಟುಂಬ
ರೂಪಾ ವಿರುದ್ಧವೂ ಕಿಡಿ ಕಾರಿರುವ ಮಧುಸೂಧನ್ ರೆಡ್ಡಿ, ರೂಪಾ ಸುಖಾಸುಮ್ಮನೆ ನಮ್ ಹೆಸ್ರು ತರ್ತಿದ್ದಾರೆ. ಫ್ಯಾಕ್ಟ್ ಇದ್ರೆ ಅದನ್ನು ತೋರುಸ್ಲಿ. ರೂಪ ಅವ್ರು ನನ್ ಮೇಲೂ ಪರ್ಸನಲಿ ಅಲಿಕೇಷನ್ ಮಾಡಿದ್ದಾರೆ. ನಾನು ರೂಪಾ ವಿರುದ್ಧ ಕಾನೂನು ಹೋರಾಟ ಮಾಡ್ತಿನಿ. ನಮ್ಮ ಇಡೀ ಕುಟುಂಬ ರೂಪಾ ವಿರುದ್ಧ ಹೋರಾಡಲಿದೆ ಎಂದಿದ್ದಾರೆ ಮಧುಸೂಧನ್ ರೆಡ್ಡಿ.
ಡಿ.ರೂಪಾ ಮೌದ್ಗಿಲ್ ಪರ ಯಾರು?
ಇಡೀ ಬೆಳವಣಿಗೆಯಲ್ಲಿ ಡಿ.ರೂಪಾ ಪರ ಸೋಷಿಯಲ್ ಮೀಡಿಯಾದ ಕೆಲವರನ್ನು ಬಿಟ್ಟರೆ ಪತಿ ಮನೀಶ್ ಮೌದ್ಗಿಲ್ ಯಾರೊಬ್ಬರೂ ಬಹಿರಂಗವಾಗಿ ಪರ ನಿಂತಿಲ್ಲ. ಮನೀಶ್ ಅವರಿಗೆ ವರ್ಗಾವಣೆಯಾದರೂ, ಅವರೂ ಮಾತನಾಡಿಲ್ಲ. ರೂಪಾ ಅವರ ಇಡೀ ಕುಟುಂಬದ ಯಾರೊಬ್ಬರೂ ರೂಪಾ ಪರ ನಿಂತಿಲ್ಲ. ಆ ವಿಚಾರದಲ್ಲಿ ರೋಹಿಣಿ ಪರ ಇಡೀ ಕುಟುಂಬ ಸ್ಟ್ರಾಂಗ್ ಆಗಿ ನಿಂತಿದೆ.