ಶಿವ ರಾಜ್ ಕುಮಾರ್ ಕೂಡಾ ಈಗ ರಾಜಕೀಯಕ್ಕೆ ಬಂದಿದ್ದಾರೆ. ದೊಡ್ಮನೆಯವರು ತಮಗೆ ತಾವೇ ಹಾಕಿಕೊಂಡಿದ್ದ ನಿಯಮಗಳನ್ನೆಲ್ಲ ಮೀರಿ ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿದ್ದಾರೆ. 2014ರಲ್ಲಿ ಕೇವಲ ಪತ್ನಿ ಗೀತಾ ಅವರ ಪರವಾಗಿ ಪ್ರಚಾರ ಮಾಡಿದ್ದ ಶಿವ ರಾಜ್ ಕುಮಾರ್, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿಗಳ ಪರವಾಗಿ ಪ್ರಚಾರಕ್ಕಿಳಿದಿದ್ದಾರೆ.
ಸೊರಬದಲ್ಲಿ ಬಾವಮೈದುನ ಮಧು ಬಂಗಾರಪ್ಪ ಪರವಾಗಿ, ನಂತರ ಸಾಗರ ಕ್ಷೇತ್ರದಲ್ಲಿ ಬೇಳೂರು ಗೋಪಾಲಕೃಷ್ಣ, ತೀರ್ಥಹಳ್ಳಿಯಲ್ಲಿ ಕಿಮ್ಮನೆ ರತ್ನಾಕರ್, ಶಿರಸಿ ಸಿದ್ದಾಪುರ ಕ್ಷೇತ್ರದಲ್ಲಿ ಭೀಮಣ್ಣ ನಾಯ್ಕ್ ಪರವಾಗಿ ಪ್ರಚಾರ ಮಾಡಿದ್ದ ಶಿವರಾಜ್ ಕುಮಾರ್, ಸಿದ್ದರಾಮಯ್ಯ ಪರವಾಗಿ ವರುಣಾದಲ್ಲಿಯೂ ಪ್ರಚಾರ ಮಾಡುತ್ತಿದ್ಧಾರೆ.
ಈ ವೇಳೆ ಮಾತನಾಡಿರುವ ಶಿವರಾಜ್ ಕುಮಾರ್ ನಾನು ರಾಹುಲ್ ಗಾಂಧಿಯವರ ಅಭಿಮಾನಿ ಎಂದು ಹೇಳಿಕೊಂಡಿದ್ದಾರೆ. ಅವರ ಭಾರತ್ ಜೋಡೋ ಯಾತ್ರೆಯಿಂದ ನಾನು ಸ್ಫೂರ್ತಿ ಪಡೆದಿದ್ದೇನೆ ಎಂದಿರುವ ಶಿವ ರಾಜ್ ಕುಮಾರ್, ನನಗೆ ರಾಜಕೀಯ ಗೊತ್ತಿಲ್ಲ ಎಂದೂ ಹೇಳಿದ್ದಾರೆ.