ಶಿವಣ್ಣ, ಇದು ನಿಮಗೆ ಬೇಕಿತ್ತಾ..? ಅಪ್ಪಾಜಿ, ಅಪ್ಪು ಅವರನ್ನು ನೋಡಿ ಕಲಿಯಬಾರದಾಗಿತ್ತಾ..? ಈಗಾಗಲೇ ಒಂದ್ಸಲ ತಪ್ಪು ಮಾಡಿದ್ರಿ, ಆಮೇಲೆ ಆ ತಪ್ಪು ರಿಪೀಟ್ ಮಾಡಲ್ಲ ಅಂದ್ರಿ, ಈಗ ಮತ್ತೊಮ್ಮೆ ಅದೇ ಅದೇ ತಪ್ಪು ಮಾಡ್ತಿದ್ದೀರಿ.. ನೀವು ರಾಜಕೀಯಕ್ಕೆ ಬರಬಾರದಾಗಿತ್ತು..
ಇದು ಅಪ್ಪಟ ಶಿವಣ್ಣ ಫ್ಯಾನ್ಸ್ ವಾದ. ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಂತೆ, ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣ ವಿರುದ್ಧ ಅಭಿಯಾನವೇ ನಡೆದು ಹೋಯ್ತು. ಹಾಗಂತ ಹಾಗೆ ಅಭಿಯಾನ ಮಾಡಿದವರು ಶಿವಣ್ಣ ಅಥವಾ ಡಾ.ರಾಜ್ ಕುಟುಂಬದ ವಿರೋಧಿಗಳಾಗಿರಲಿಲ್ಲ. ಅಪ್ಪಟ ಫ್ಯಾನ್ಸ್ ಆಗಿದ್ದರು ಎನ್ನುವುದು ವಿಶೇಷ.
ಹೋದರೆ ಏನ್ ತಪ್ಪು. ಆಗಿನ ಕಾಲಕ್ಕೆ ಡಾ.ರಾಜ್ ತೆಗೆದುಕೊಂಡಿದ್ದ ನಿರ್ಧಾರ ಸರಿಯಿತ್ತು. ಅದು ಅವರ ಪರ್ಸನಲ್. ಈಗ ಗೀತಾ ಅವರಿಗಾಗಿ ಶಿವಣ್ಣ ನಿರ್ಧಾರ ತೆಗೆದುಕೊಂಡಿದ್ದಾರೆ. ಶಿವಣ್ಣ ಅವರೇನೂ ಕಾಂಗ್ರೆಸ್ ಸದಸ್ಯರಾಗಿಲ್ಲವಲ್ಲ, ಶಿವಣ್ಣ ಅವರ ಕುಟುಂಬ ರಾಜಕೀಯಕ್ಕೆ ಬರುವುದಿಲ್ಲ ಎಂಬ ಕಾರಣಕ್ಕೆ, ಬಂಗಾರಪ್ಪ ಅವರ ಮಗಳಾಗಿಯೂ ರಾಜಕೀಯದಿಂದ ದೂರ ಇರಬೇಕಾ..? ಅವರಿಗೆ ರಾಜಕೀಯ ಗೊತ್ತು, ಮಾಡ್ತಾರೆ ಬಿಡಿ ಅನ್ನೋದು ಪರ ನಿಂತವರ ವಾದ. ಹೀಗೆ ಎರಡು ಭಾಗಗಳಾಗಿ ಅಭಿಮಾನಿಗಳೇ ಡಿವೈಡ್ ಆಗಿ ಹೋಗಿದ್ದಾರೆ. ಅಂದಹಾಗೆ ಇದು ಅಭಿಮಾನಿಗಳ ರಿಯಾಕ್ಷನ್.
ಆದರೇನಂತೆ.. ಶಿವಣ್ಣ ಅವರೂ ಕೂಡಾ ಕಾಂಗ್ರೆಸ್ ಪರ ಪ್ರಚಾರ ಮಾಡಲಿದ್ದಾರೆ. ಸೊರಬದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಧು ಬಂಗಾರಪ್ಪ ಅವರೇ ಈ ಮಾತು ಹೇಳಿದ್ದಾರೆ. ಗೀತಾ ಶಿವರಾಜ್ ಕುಮಾರ್ ಅಧಿಕೃತವಾಗಿ ಕಾಂಗ್ರೆಸ್ ಸೇರ್ಪಡೆಯಾದ ಬೆನ್ನಲ್ಲೇ ಮಧು ಬಂಗಾರಪ್ಪ ಈ ಮಾತು ಹೇಳಿರುವುದು ವಿಶೇಷ. ಮಧು ಬಂಗಾರಪ್ಪ ಅಷ್ಟೇ ಅಲ್ಲ, ಗೀತಾ ಅವರೂ ಕೂಡಾ ಈ ಮಾತು ಹೇಳಿದ್ದಾರೆ.
ನಾನು ನನ್ನ ಪತ್ನಿಯ ನಿರ್ಧಾರಕ್ಕೆ ಬೆಂಬಲವಾಗಿರುತ್ತೇನೆ ಎಂದಿದ್ದಾರೆ ಶಿವಣ್ಣ. ಶಿವಣ್ಣ ಕೂಡಾ ಪ್ರಚಾರಕ್ಕೆ ಹೋಗುತ್ತಿದ್ದು, ಗೀತಾ ಜೊತೆಯಲ್ಲೇ ಪ್ರಚಾರ ಮಾಡಲಿದ್ದಾರೆ. ಗೀತಾ ಅವರು ಕಾಂಗ್ರೆಸ್ಸಿಗೆ ಸೇರಿರುವುದರಿಂದ, ಕಾಂಗ್ರೆಸ್ ಪರವೇ ಪ್ರಚಾರ ಮಾಡಬೇಕಾಗಿ ಬರಬಹುದು. ಕಳೆದ ಕೆಲವು ವರ್ಷಗಳಿಂದ ಗೀತಾ ಅವರು ಶಕ್ತಿಧಾಮಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ರಾಜಕೀಯಕ್ಕೆ ಸೇರುವುದರಿಂದ ಅವರ ಇನ್ನಷ್ಟು ಒಳ್ಳೆಯ ಕೆಲಸಗಳಿಗೆ, ಯೋಜನೆಗಳಿಗೆ ಶಕ್ತಿ ಬರಲಿದೆ ಎಂದಿದ್ದಾರೆ ಶಿವಣ್ಣ.
ಗೀತಾ ಅವರನ್ನು ಕಾಂಗ್ರೆಸ್ಸಿಗೆ ಬರಮಾಡಿಕೊಂಡ ಡಿ.ಕೆ.ಶಿವರಾಜ್ ಕುಮಾರ್, ಮಧು ಬಂಗಾರಪ್ಪ ಅವರಿಗಾಗಿ ಗಾಳ ಹಾಕಿದೆ. ಆದರೆ ಗೀತಾ ಅವರನ್ನು ಕಾಂಗ್ರೆಸ್ಸಿಗೆ ಕರೆತರಲು ಬಲೆಯನ್ನೇ ಹಾಕಬೇಕಾಯಿತು. ಅವರು ನನ್ನ ಬಲೆಗೂ ಬೀಳಲಿಲ್ಲ. ಆದರೆ ರಾಹುಲ್ ಗಾಂಧಿ ಅವರು ಘೋಷಿಸಿರುವ ಕಾರ್ಯಕ್ರಮಗಳಿಗೆ ಬಿದ್ದರು ಎಂದಿದ್ದಾರೆ ಡಿಕೆ ಶಿವಕುಮಾರ್.
ಮೋದಿಯವರು ಕಾಂಗ್ರೆಸ್ ಘೋಷಣೆಗಳಿಗೆ ಗೀತಾ ಉತ್ತರ ನೀಡಿದ್ದಾರೆ. ಡಾ.ರಾಜ್ ಕುಮಾರ್ ಸೊಸೆ, ಶಿವ ರಾಜ್ ಕುಮಾರ್ ಪತ್ನಿ ಹಾಗೂ ನನ್ನ ಗುರುಗಳಾದ ಎಸ್. ಬಂಗಾರಪ್ಪ ಅವರ ಮಗಳು ಗೀತಾ, ಕಾಂಗ್ರೆಸ್ ಸೇರುವ ಮೂಲಕ ಮೋದಿಯ ಟೀಕೆಗಳಿಗೆ ಉತ್ತರ ಕೊಟ್ಟಿದ್ದಾರೆ ಎನ್ನುವುದು ಡಿಕೆ ಶಿವಕುಮಾರ್ ವಿವರಣೆ.