ಮಹಮ್ಮದ್ ಶಮಿ ಭಾರತೀಯ ಕ್ರಿಕೆಟ್ನ ಆಧಾರ ಸ್ಥಂಭಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್ನಲ್ಲಂತೂ ಅವರ ಸ್ವಿಂಗ್ ಮ್ಯಾಜಿಕ್ಗೆ ಎದುರಾಳಿ ಆಟಗಾರರು ತಡಬಡಿಸಿ ಹೋಗುತ್ತಾರೆ. ಫಿಟ್ನೆಸ್ ಕೊರತೆಯಿಂದಾಗಿ ಕಳೆದ ಕೆಲವು ತಿಂಗಳಿಂದ ಕ್ರಿಕೆಟ್ನಿಂದ ಹೊರಗುಳಿದಿದ್ದಾರೆ. ಟಿ-20 ವಿಶ್ವಕಪ್ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದಾರೆ. ಅವರೀಗ ದಸರಾಗೆ ಶುಭಾಶಯ ಕೋರಿದ್ದು ತಪ್ಪಾಗಿ ಹೋಗಿದೆ.
On the happy occasion of Dussehra, I pray that Lord Ram fills your life with lots of happiness, prosperity, and success. Happy Dussehra to you and your family. #mdshami11 #Dussehra pic.twitter.com/wsFk7M1Gj5
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) October 5, 2022
ದೇಶದ ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು. ಎಲ್ಲರಿಗೂ ಸಂತೋಷ ಮತ್ತು ಯಶಸ್ಸು ಸಿಗಲಿ ಭಗವಾನ್ ಶ್ರೀರಾಮನಲ್ಲಿ ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದರು ಮಹಮ್ಮದ್ ಶಮಿ. ದೇಶ ಧರ್ಮ ಸಂಘರ್ಷದಲ್ಲಿ ಧಗಧಗಿಸುತ್ತಿರೋ ಸಂದರ್ಭದಲ್ಲಿ ಇಂತಹ ಬೆಳವಣಿಗೆಗಳನ್ನು ಸ್ವಾಗತಿಸಬೇಕಿತ್ತು. ಸ್ವಾಗತಿಸಬೇಕು ಕೂಡಾ. ಅದರೆ ಆಗಿದ್ದೇ ಬೇರೆ. ಕೆಲವು ಮೂಲಭೂತವಾದಿ ಮುಸ್ಲಿಮರು ಶಮಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.
ನೀನೊಬ್ಬ ಮುಸ್ಲಿಮನೇ ಅಲ್ಲ. ಶ್ರೀರಾಮನನ್ನು ಆರಾಧಿಸುವ ನೀನ್ಯಾವ ಮುಸ್ಲಿಂ. ನಿನಗೆ ನಾಚಿಕೆಯಾಗಬೇಕು.ಇದು ಇಸ್ಲಾಂ ವಿರುದ್ಧ. ನಿನ್ನ ವಿರುದ್ಧ ಫತ್ವಾ ಹೊರಡಿಸಬೇಕು.. ಎಂದೆಲ್ಲ ಕಿಡಿಕಾರಿದ್ದಾರೆ.
ಟಿ-20 ವಿಶ್ವಕಪ್ ಅಭಿಯಾನದಲ್ಲಿ ಭಾರತ ಪಾಕ್ ವಿರುದ್ಧ ಸೋತಾಗ ಕೂಡಾ ಇಂತಹುದೇ ದಾಳಿ ನಡೆದಿತ್ತು. ಆಗ ಕೆಲವು ಹಿಂದೂಗಳು ಕಿಡಿಕಾರಿದ್ದರು. ಆದರೆ ತನಿಖೆಯಲ್ಲಿ ಶಮಿ ವಿರುದ್ಧದ ಅಟ್ಯಾಕ್ ಶುರುವಾಗಿದ್ದು ಪಾಕಿಸ್ತಾನದಿಂದ ಎನ್ನುವುದು ಸಾಬೀತಾಗಿತ್ತು.
ಈಗ ಮತ್ತೊಮ್ಮೆ ಶಮಿ ಟೀಕೆಗೆ ಗುರಿಯಾಗಿದ್ದಾರೆ. ಕ್ರಿಕೆಟ್ ಆಟದ ವಿಷಯ ಅಲ್ಲವಾದ್ದರಿಂದ ಕ್ರಿಕೆಟ್ ಆಟಗಾರರೂ ಖಂಡಿಸುವಂತಿಲ್ಲ. ಏಕೆಂದರೆ ಅದು ಧರ್ಮ ಸೂಕ್ಷ್ಮ. ಇತ್ತ ಬುದ್ದಿಜೀವಿಗಳೂ ಶಮಿಯನ್ನು ಟೀಕಿಸುತ್ತಿರುವವರನ್ನು ಖಂಡಿಸುತ್ತಿಲ್ಲ. ಶಮಿ ಈಗ ಏಕಾಂಗಿ.