ಸಚಿನ್ ಸೆಂಚುರಿ ಹೊಡೆದರೆ ಸೋಲುತ್ತೆ ಅನ್ನೋದು ಕೆಲವರ ವಾದ. ವಿತಂಡವಾದವೂ ಹೌದು. ಆದರೆ ಒಂದು ಸತ್ಯ ಇಲ್ಲಿದೆ. ಸಚಿನ್ ಸೆಂಚುರಿ ಹೊಡೆದಾಗಲೂ ಭಾರತ ಸೋತಿದೆ. ಹಾಗೆ ಭಾರತ ಸೋತ ಪಂದ್ಯಗಳಲ್ಲಿ ಭಾರತ ಸೋತಿದ್ದೇಕೆ ಎನ್ನುವ ಲೆಕ್ಕಾಚಾರ ಇಲ್ಲಿದೆ. ಲೆಕ್ಕ ಸತ್ಯ. ಈ ಲೆಕ್ಕ ನೋಡಿದ ನಂತರ ಸಚಿನ್ ಸೆಂಚುರಿ ಹೊಡೆದ ಕಾರಣಕ್ಕೇ ಪಂದ್ಯ ಸೋತಿತಾ? ಅಥವಾ ಬೇರೆ ಕಾರಣಕ್ಕೆ ಸೋತಿತಾ ಅನ್ನೋ ನಿರ್ಧಾರ ನಿಮಗೆ ಬಿಟ್ಟಿದ್ದು.
1. ಪಂದ್ಯ: 1996ರ ವಿಶ್ವಕಪ್. ಶ್ರೀಲಂಕಾ ವಿರುದ್ಧ
ಭಾರತದ ಸ್ಕೋರ್ : 271/5
ಸಚಿನ್ : 137 (137 ಬಾಲ್)
ಪಂದ್ಯದಲ್ಲಿ ಸಚಿನ್ 137 ಎಸೆತಕ್ಕೆ 137 ರನ್ ಹೊಡೆದರು. ಸಚಿನ್ ಬಿಟ್ಟರೆ ಅಜರುದ್ದೀನ್ ಅರ್ಧಶತಕ ಬಾರಿಸಿದ್ದರು. ಆ ಪಂದ್ಯದಲ್ಲಿ ಮನೋಜ್ ಪ್ರಭಾಕರ್ 4 ಓವರಲ್ಲಿ 47 ರನ್ ಚಚ್ಚಿಸಿಕೊಂಡಿದ್ದರು. ಬ್ಯಾಟಿಂಗಿನಲ್ಲಿ ಓಪನಿಂಗ್ ಬಂದಿದ್ದ ಮನೋಜ್ ಪ್ರಭಾಕರ್ 36 ಎಸೆತಗಳಲ್ಲಿ 7 ರನ್ ಗಳಿಸಿದ್ದರು. ಪಂದ್ಯವನ್ನು ಶ್ರೀಲಂಕಾ 48.2 ಓವರಲ್ಲಿ ಗೆದ್ದಿತ್ತು.
1. ಪಂದ್ಯ : 1996. ಪಾಕ್ ವಿರುದ್ಧ
ಭಾರತದ ಸ್ಕೋರ್ : 186/4.
ಸಚಿನ್ : 100 ರನ್ (111 ಬಾಲ್)
ಸಚಿನ್ ಔಟ್ ಆದಾಗ ಭಾರತದ ಸ್ಕೋರ್ 186ಕ್ಕೆ 4 ಇತ್ತು. ನಂತರ ಬಂದವರೆಲ್ಲ ಡುಮ್ಕಿ ಹೊಡೆದರು. ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಪಾಕಿಸ್ತಾನಕ್ಕೆ 33 ಓವರುಗಳಲ್ಲಿ 187 ರನ್ ಗುರಿ ನೀಡಲಾಯಿತು.
2. ಪಂದ್ಯ : 1996. ಶ್ರೀಲಂಕಾ ವಿರುದ್ಧ
ಭಾರತದ ಸ್ಕೋರ್ : 226
ಸಚಿನ್ : 110 ರನ್ (138 ಬಾಲ್)
ಸಚಿನ್ ಬಿಟ್ಟರೆ 99 ಎಸೆತಗಳಲ್ಲಿಅಜರ್ ಹೊಡೆದ 58ರನ್ ದೊಡ್ಡ ಮೊತ್ತ. ಬೌಲಿಂಗಲ್ಲೂ ಮಿಂಚಿದ ಸಚಿನ್ 6 ಓವರಲ್ಲಿ 29ರನ್ ನೀಡಿ ಒಂದು ವಿಕೆಟ್ ಪಡೆದರು. ಉಳಿದಂತೆ ಯಾವೊಬ್ಬ ಬೌಲರ್ ಕೂಡಾ ಒಂದೂ ವಿಕೆಟ್ ಪಡೆಯಲಿಲ್ಲ. ಶ್ರೀಲಂಕಾ 1 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿ ಗೆದ್ದಿತು.
3. ಪಂದ್ಯ : 1998. ಆಸ್ಟ್ರೇಲಿಯಾ ವಿರುದ್ಧ
ಟಾರ್ಗೆಟ್ : 276 (46 ಓವರ್)
ಸಚಿನ್ : 143 ರನ್ (131 ಬಾಲ್)
ಸಚಿನ್ 143 ರನ್ ಹೊಡೆದು ಔಟ್ ಆದಾಗ ಸ್ಕೋರ್ 242/5. ಉಳಿದ 3 ಓವರುಗಳಲ್ಲಿ ಭಾರತ 34 ರನ್ ಹೊಡೆಯಬೇಕಿತ್ತು. ಆದರೆ 3 ಓವರುಗಳಲ್ಲಿ ಗಳಿಸಿದ್ದು 8 ರನ್. ಅಂತ್ಯಕ್ಕೆ ಭಾರತದ ಸ್ಕೋರ್ 250/5.
4. ಪಂದ್ಯ : 2000. ಶ್ರೀಲಂಕಾ ವಿರುದ್ಧ
ಭಾರತದ ಸ್ಕೋರ್ : 224/8 (50 ಓವರ್)
ಸಚಿನ್ : 101 ರನ್ (140 ಬಾಲ್)
ಸಚಿನ್ ಶತಕ ಬಿಟ್ಟರೆ ಉಳಿದವರಿಂದ ಒಂದೇ ಒಂದು ಅರ್ಧ ಶತಕವೂ ಬರಲಿಲ್ಲ. ಶ್ರೀಲಂಕಾ 43.5 ಓವರಲ್ಲಿ 225/5 ರನ್ ಗಳಿಸಿ ಗೆದ್ದಿತು. ಸಚಿನ್ ಬೌಲಿಂಗಿನಲ್ಲೂ ಶ್ರಮ ಪಟ್ಟರು. 5 ಓವರಲ್ಲಿ 22 ರನ್ ಬಿಟ್ಟುಕೊಟ್ಟರು. ಆ ಪಂದ್ಯದಲ್ಲಿ ಶ್ರೀನಾಥ್ ಬಿಟ್ಟರೆ ಉಳಿದವರಿಂದ ಬೆಂಬಲ ಸಿಗಲಿಲ್ಲ.
5. ಪಂದ್ಯ : 2000. ಜಿಂಬಾಬ್ವೆ ವಿರುದ್ಧ
ಭಾರತದ ಸ್ಕೋರ್ :283/8 (50 ಓವರ್)
ಸಚಿನ್ : 146 ರನ್ (153 ಬಾಲ್)
ಈ ಪಂದ್ಯದಲ್ಲಿ ಸಚಿನ್ ಔಟಾಗಿದ್ದು 46.3ನೇ ಓವರ್ನಲ್ಲಿ. ಆಗ ಭಾರತದ ಸ್ಕೋರ್ 235 ರನ್. ಕೊನೆಯಲ್ಲಿ ಜಹೀರ್ ಮತ್ತು ಅಗರ್ಕರ್ ಅಬ್ಬರಿಸಿದ್ದಕ್ಕೆ 283 ರನ್ ಗಳಿಸಿತ್ತು ಭಾರತ. ಆ ಪಂದ್ಯದಲ್ಲಿ ಸಚಿನ್ 6 ಓವರ್ ಬೌಲ್ ಮಾಡಿ ಕೇವಲ 35 ರನ್ ನೀಡಿ ಒಂದು ವಿಕೆಟ್ ಕೂಡಾ ಪಡೆದಿದ್ದರು. ಜಿಂಬಾಬ್ವೆ 49.5 ಓವರಲ್ಲಿ 284 ರನ್ ಗಳಿಸಿ ಗೆದ್ದಿತ್ತು.
6. ಪಂದ್ಯ : 2001. ದ.ಆಫ್ರಿಕಾ ವಿರುದ್ಧ
ಭಾರತದ ಸ್ಕೋರ್ :279/5 (50 ಓವರ್)
ಸಚಿನ್ : 101 ರನ್ (129 ಬಾಲ್)
ಈ ಪಂದ್ಯದಲ್ಲಿ ಗಂಗೂಲಿ ಕೂಡಾ 127 ರನ್ ಗಳಿಸಿದ್ದರು. ಗಂಗೂಲಿ ಔಟ್ ಆದಾಗ ಭಾರತದ ಸ್ಕೋರ್ 193. ಸಚಿನ್ ಕ್ರೀಸ್ನಲ್ಲಿದ್ದರೂ ಬಂದವರೆಲ್ಲ ಹಾಗೆ ಬಂದು ಹೀಗೆ ಹೋದರು. ಸಚಿನ್ ಔಟ್ ಆದ ಕೊನೆಯ ಬ್ಯಾಟ್ಸ್ಮನ್. ಬೌಲಿಂಗಿನಲ್ಲೂ ಮಿಂಚಿದ್ದ ಸಚಿನ್ 9 ಓವರ್ ಬೌಲ್ ಮಾಡಿ 51 ರನ್ ನೀಡಿ ಒಂದು ವಿಕೆಟ್ ಪಡೆದಿದ್ದರು. ಅಗರ್ಕರ್ ಬಿಟ್ಟರೆ ಉಳಿದವರು ದುಬಾರಿಯಾದರು.
7. ಪಂದ್ಯ : 2004. ಪಾಕ್ ವಿರುದ್ಧ
ಭಾರತಕ್ಕೆ ಟಾರ್ಗೆಟ್ 329 ರನ್
ಸಚಿನ್ : 141 ರನ್ (135 ಬಾಲ್)
ಸಚಿನ್ ಬಿಟ್ಟರೆ ಇನ್ನೊಬ್ಬರೇ ಒಬ್ಬರು ಕನಿಷ್ಠ ಅರ್ಧ ಶತಕವನ್ನೂ ಗಳಿಸಲಿಲ್ಲ. ಸಚಿನ್ ಔಟ್ ಆದಾಗ ಭಾರತದ ಸ್ಕೋರ್ 245/4 (38.4ನೇ ಓವರ್) ಉಳಿದ 68 ಎಸೆತಗಳಲ್ಲಿ 85 ರನ್ ಗಳಿಸಬೇಕಿತ್ತು. 6 ವಿಕೆಟ್ ಇದ್ದವು. ಆದರೆ ಇನ್ನೂ 8 ಎಸೆತ ಇರುವಂತೆಯೇ ಭಾರತ ಆಲೌಟ್ ಆಗಿತ್ತು.
8. ಪಂದ್ಯ : 2005. ಪಾಕ್ ವಿರುದ್ಧ
ಭಾರತದ ಸ್ಕೋರ್ :315/6 (48 ಓವರ್)
ಸಚಿನ್ : 123 ರನ್ (130 ಬಾಲ್)
ಸಚಿನ್ ಬಿಟ್ಟರೆ ಧೋನಿ ಗಳಿಸಿದ 47(64 ಎಸೆತ) ರನ್ನುಗಳೇ ಅತೀ ಹೆಚ್ಚಿನ ಸ್ಕೋರ್. 3ನೇ ಅತ್ಯಧಿಕ ಸ್ಕೋರ್ ಎಕ್ಸ್ಟ್ರಾ 39 ರನ್. ಪಂದ್ಯದಲ್ಲಿ ಬಾಲಾಜಿ, ನೆಹ್ರಾ ಮತ್ತು ಜಹೀರ್ ದುಬಾರಿಯಾದರು. ಈ ಮೂವರ 26 ಓವರುಗಳಲ್ಲಿ ಪಾಕ್ 188 ರನ್ ಚಚ್ಚಿತು. ಸಚಿನ್ 6 ಓವರ್ ಬೌಲ್ ಮಾಡಿ 36 ರನ್ ನೀಡಿ ಒಂದು ವಿಕೆಟ್ ಕೂಡಾ ಪಡೆದರು. ಆದರೆ ಪಾಕ್ ಗುರಿಯನ್ನು ಸಲೀಸಾಗಿ ತಲುಪಿತು.
9. ಪಂದ್ಯ : 2006. ಪಾಕ್ ವಿರುದ್ಧ
ಭಾರತದ ಸ್ಕೋರ್ :315/6 (48 ಓವರ್)
ಸಚಿನ್ : 100 ರನ್ (113 ಬಾಲ್)
ಭಾರತ 49.4 ಓವರುಗಳಿಗೆ ಆಲೌಟ್. ಪಠಾಣ್ ಮತ್ತು ಧೋನಿ ತಲಾ 60 ರನ್ ಸಿಡಿಸಿದ್ದರು. ಸಚಿನ್ ಔಟ್ ಆಗಿದ್ದು 45ನೇ ಓವರಿನಲ್ಲಿ. ಉಳಿದ 5 ಓವರಿನಲ್ಲಿ ಭಾರತ ಗಳಿಸಿದ್ದು ಕೇವಲ 23 ರನ್. ಮಳೆ ಬಂದು ಪಂದ್ಯ ನಿಂತಾಗ ಪಾಕ್ 47 ಓವರುಗಳಲ್ಲಿ 311/7 ಗಳಿಸಿ ಕಷ್ಟದಲ್ಲೇ ಇತ್ತು. ಆದರೆ ಡಕ್ವರ್ತ್ ಲೂಯಿಸ್ ಪ್ರಕಾರ ಪಂದ್ಯ ನಿಂತು ಪಾಕ್ ಪಂದ್ಯವನ್ನು ಗೆದ್ದೇಬಿಟ್ಟಿತು.
10. ಪಂದ್ಯ :. ವೆಸ್ಟ್ ಇಂಡೀಸ್ ವಿರುದ್ಧ
ಭಾರತದ ಸ್ಕೋರ್ :309/5 (50 ಓವರ್)
ಸಚಿನ್ : 141 ರನ್ (148 ಬಾಲ್)
ಈ ಪಂದ್ಯದಲ್ಲೂ ಕೂಡಾ ವಿಲನ್ ಆಗಿದ್ದು ಮಳೆ. ಪಂದ್ಯ ನಿಂತಾಗ ವಿಂಡೀಸ್ 20 ಓವರುಗಳಲ್ಲಿ 141/2 ರನ್ ಗಳಿಸಿತ್ತು. ಡಕ್ವರ್ತ್ ನಿಯಮದ ಪ್ರಕಾರ ವಿಂಡೀಸ್ ಗೆದ್ದಿತು.
11. ಪಂದ್ಯ :. 2009. ಆಸ್ಟ್ರೇಲಿಯಅ ವಿರುದ್ಧ
ಟಾರ್ಗೆಟ್ :351 ರನ್ (50 ಓವರ್)
ಸಚಿನ್ : 175 ರನ್ (141 ಬಾಲ್)
ಸಚಿನ್ ಇರುವವರೆಗೆ ಆಸ್ಟ್ರೇಲಿಯಾಗೆ ಗೆಲುವಿನ ಬಗ್ಗೆ ನಂಬಿಕೆ ಇರಲಿಲ್ಲ. ಸಚಿನ್ಗೆ ರೈನಾ (59 ರನ್) ಬಿಟ್ಟರೆ ಉಳಿದವರಿಂದ ಬೆಂಬಲ ಸಿಗಲಿಲ್ಲ. ಸಚಿನ್ ಔಟ್ ಆದಾಗ 18 ಎಸೆತಗಳಲ್ಲಿ 19 ರನ್ ಗಳಿಸಬೇಕಿತ್ತು. 3 ವಿಕೆಟ್ ಇದ್ದವು. ಆದರೆ 3 ರನ್ನುಗಳಿಂದ ಪಂದ್ಯ ಸೋತಿತು ಭಾರತ.
12. ಪಂದ್ಯ :. 2009. ದ.ಆಫ್ರಿಕಾ ವಿರುದ್ಧ
ಭಾರತದ ಸ್ಕೋರ್ : 293 ರನ್ ಆಲೌಟ್
ಸಚಿನ್ : 111 ರನ್ (101 ಬಾಲ್)
ಸಚಿನ್ ಔಟ್ ಆದಾಗ ಭಾರತದ ಸ್ಕೋರ್ 267/1. ಉಳಿದ 9 ಬ್ಯಾಟ್ಸ್ಮನ್ಗಳು 30 ರನ್ ಹೊಡೆಯುವಷ್ಟರಲ್ಲಿ ಆಲೌಟ್. ಸೋಲಿಗೆ ಕಾರಣ ಇಷ್ಟೇ ಸಾಕು.
13. ಪಂದ್ಯ :. 2012. ಬಾಂಗ್ಲಾದೇಶ ವಿರುದ್ಧ
ಭಾರತದ ಸ್ಕೋರ್ : 289 ರನ್
ಸಚಿನ್ : 114 ರನ್ (147 ಬಾಲ್)
ಜಹೀರ್ ಬಿಟ್ಟರೆ ಉಳಿದವರೆಲ್ಲ ಧಾರಾಳವಾಗಿ ರನ್ ಕೊಟ್ಟರು. ಕ್ಯಾಚುಗಳು ಕೈ ಜಾರಿದವು. ಇದು ತೆಂಡೂಲ್ಕರ್ ಹೊಡೆದಿದ್ದ 100ನೇ ಶತಕ.